ಬೇಕಾಗುವ ಸಾಮಗ್ರಿಗಳು:
- ಒಂದೆಲಗ ೧/೨ cup ಕತ್ತರಿಸಿದ್ದು (whole plant)
- ಕಾಳು ಮೆಣಸು ೫-೬
- ಜೀರಿಗೆ 1tsp
- ಕಾಯಿತುರಿ 1cup
- ಉಪ್ಪು
- ಬೆಲ್ಲ
- ಮಜ್ಜಿಗೆ 1cup
- ಎಣ್ಣೆ
- ಒಣಮೆಣಸು
- ಸಾಸಿವೆ ಕಾಳು
- ಕಾಳು ಮೆಣಸು ಮತ್ತು ಜೀರಿಗೆಯನ್ನು ಹುರಿದಿಡಿ.
- ಮಿಕ್ಸಿಗೆ ಕಾಯಿತುರಿ,ಹುರಿದಿಟ್ಟ ಕಾಳು ಮೆಣಸು ಮತ್ತು ಜೀರಿಗೆ ಹಾಕಿ ನುಣ್ಣಗೆ ರುಬ್ಬಿ.
- ಒಂದೆಲಗವನ್ನು ಬೇರೆಯಾಗಿಯೇ ರುಬ್ಬಿ ಸೋಸಿ.
- ಒಂದು ಪಾತ್ರೆ ತೆಗೆದುಕೊಂಡು ರುಬ್ಬಿದ ಕಾಯಿತುರಿ ಮಿಶ್ರಣ,ಸೋಸಿದ ಒಂದೆಲಗದ ರಸ,ಮಜ್ಜಿಗೆ,ಉಪ್ಪು,ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಕರಡಿ
- ಎಣ್ಣೆ, ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ.
No comments:
Post a Comment