To read it in English click here
ಬೇಕಾಗುವ ಸಾಮಗ್ರಿಗಳು :
- Marrow squash 1/2 chopped
- ಕಾಯಿತುರಿ ೧ ಕಪ್
- ಮೊಸರು ೧ ಕಪ್
- ಹಸಿಮೆಣಸು ೧ ಸಣ್ಣಗೆ ಹೆಚ್ಚಿದ್ದು
- ಈರುಳ್ಳಿ ೧/೨ ಸಣ್ಣಗೆ ಹೆಚ್ಚಿದ್ದು
- ಒಣಮೆಣಸು ೧ ಕಟ್ ಮಾಡಿಟ್ಟಿದ್ದು
- ಎಣ್ಣೆ ೧ ಚಮಚ
- ಸಾಸಿವೆ ಕಾಳು ೧/೨ ಚಮಚ
- ಇಂಗು ಚಿಟಿಕೆ
- ಅರಿಶಿನ ಚಿಟಿಕೆ (optional)
- ಉಪ್ಪು
- ಸಕ್ಕರೆ ಚಿಟಿಕೆ
ಮಾಡುವ ವಿಧಾನ :
- Marrow squash ಬೇಯಿಸಿಟ್ಟುಕೊಳ್ಳಿ.
- ಕಾಯಿತುರಿಯನ್ನು ನುಣ್ಣನೆ ರುಬ್ಬಿಟ್ಟುಕೊಳ್ಳಿ.
- ಬೇಯಿಸಿದ marrow squashಗೆ,ರುಬ್ಬಿದ ಮಿಶ್ರಣ,ಮೊಸರು,ಈರುಳ್ಳಿ,ಹಸಿಮೆಣಸು,ಸಕ್ಕರೆ ಮತ್ತು ಉಪ್ಪು ಹಾಕಿ,ಚೆನ್ನಾಗಿ ಕರಡಿ.
- ನಂತರ ಇದಕ್ಕೆ ಎಣ್ಣೆ,ಸಾಸಿವೆ,ಇಂಗು,ಒಣಮೆಣಸು,ಅರಶಿನದ ಒಗ್ಗರಣೆ ಕೊಡಿ.
- Marrow squash ಹಶಿ ಸಿದ್ಧ.
Click here for English
ಬೇಕಾಗುವ ಸಾಮಗ್ರಿಗಳು:
- Marrow squash 1/2 ಕತ್ತರಿಸಿದ್ದು
- ಕಾಯಿತುರಿ ೧ಕಪ್
- ಮಜ್ಜಿಗೆ ೧-೨ ಕಪ್
- ಜೀರಿಗೆ ೧/೨ ಚಮಚ
- ಕೊತ್ತಂಬರಿ ೨ ಚಮಚ
- ಮೆಂತ್ಯ ೧/೪ ಚಮಚ
- ಸಾಸಿವೆ ಕಾಳು ೧ಚಮಚ
- ಇಂಗು
- ಅರಶಿನ
- ಹಸಿಮೆಣಸು೨-೩
- ಎಣ್ಣೆ ೨-೩ ಚಮಚ
- ಕರಿಬೇವಿನ ಎಲೆ ಸ್ವಲ್ಪ
- ಉಪ್ಪು ರುಚಿಗೆ
- ಸಕ್ಕರೆ ರುಚಿಗೆ
ಮಾಡುವ ವಿಧಾನ :
- ಜೀರಿಗೆ,ಕೊತ್ತಂಬರಿ ,ಸಾಸಿವೆ ,ಮೆಂತೆಯನ್ನು ಸ್ವಲ್ಪ ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.
- ಕಾಯಿತುರಿ,ಹುರಿದ ಸಾಮಗ್ರಿಗಳು ಮತ್ತು ಹಸಿಮೆಣಸನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿಗಿಡಿ.
- ಎಣ್ಣೆ ಬಿಸಿಬಂದ ತಕ್ಷಣ ಕರಿಬೇವು,ಇಂಗು,ಅರಶಿನ marrow squash ಮತ್ತು ನೀರನ್ನು ಹಾಕಿ 10 ನಿಮಿಷ ಬೇಯಿಸಿ.
- ಈಗ ರುಬ್ಬಿದ ಮಿಶ್ರಣ,ಉಪ್ಪು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ.(೫-೧೦ನಿಮಿಷ ).
- ನಂತರ ಮಜ್ಜಿಗೆಯನ್ನು ಹಾಕಿ ಚೆನ್ನಾಗಿ ಕರಡಿ.(ಮಜ್ಜಿಗೆ ಹಾಕಿ ಬಿಸಿ ಮಾಡಬೇಡಿ)
- ಬಿಸಿ ಅನ್ನದೊಂದಿಗೆ ಚೆನ್ನಾಗಿರುತ್ತದೆ.
Click here for English
ಬೇಕಾಗುವ ಸಾಮಗ್ರಿಗಳು :
- ಟೈಗರ್ ಕ್ರಾಸ್ marrow 1/2 ಬೌಲ್ ಸಣ್ಣಗೆ ಹೆಚ್ಚಿದ್ದು
- ನೀರು 1ಬೌಲ್
- ಅಕ್ಕಿ ಹಿಟ್ಟು 1ಚಮಚ
- ಸಕ್ಕರೆ 5-6ಚಮಚ
- ಸ್ವಲ್ಪ ಉಪ್ಪು ಬೇಕಾದರೆ
- ಕಾಯಿತುರಿ 2ಕಪ್
- ಏಲಕ್ಕಿ ಪೌಡರ್ 1ಚಮಚ
- ಲವಂಗ 2-3
- ಒಣ ದ್ರಾಕ್ಷಿ
- ಗೇರುಬೀಜ
- ತುಪ್ಪ
ಮಾಡುವ ವಿಧಾನ :
- ಒಂದು ಪಾತ್ರೆಗೆ marrow ಮತ್ತು ನೀರನ್ನು ಹಾಕಿ 10 ನಿಮಿಷ ಕುದಿಸಿ.
- ಸಕ್ಕರೆಯನ್ನು ಹಾಕಿ ಇನ್ನೂ 5 ನಿಮಿಷ ಕುದಿಸಿ ಮತ್ತು ಅಕ್ಕಿ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕರಡಿ ಸೇರಿಸಿ.(ಇಲ್ಲದಿದ್ದರೆ ಪಾಯಸ ಗಂಟು ಬರಬಹುದು)
- ಕಾಯಿಯನ್ನು ರುಬ್ಬಿ ಕಾಯಿಹಾಲನ್ನು ತೆಗೆದು ಪಾಯಸಕ್ಕೆ ಸೇರಿಸಿ.
- ಲವಂಗ ಮತ್ತು ಏಲಕ್ಕಿಯನ್ನು ಹಾಕಿ.
- ಒಣದ್ರಾಕ್ಷಿ ಮತ್ತು ಗೇರುಬೀಜವನ್ನು ತುಪ್ಪದಲ್ಲಿ ಹುರಿದು ಪಾಯಸವನ್ನು ಅಲಂಕರಿಸಿ.
- ಈ ಪಾಯಸ ದೋಸೆ ಜೊತೆ ಅಥವಾ ಹೀಗೆಯೂ ಚೆನ್ನಾಗಿರುತ್ತದೆ.