Click here for English
ಬೇಕಾಗುವ ಸಾಮಗ್ರಿಗಳು :
- ಟೈಗರ್ ಕ್ರಾಸ್ marrow 1/2 ಬೌಲ್ ಸಣ್ಣಗೆ ಹೆಚ್ಚಿದ್ದು
- ನೀರು 1ಬೌಲ್
- ಅಕ್ಕಿ ಹಿಟ್ಟು 1ಚಮಚ
- ಸಕ್ಕರೆ 5-6ಚಮಚ
- ಸ್ವಲ್ಪ ಉಪ್ಪು ಬೇಕಾದರೆ
- ಕಾಯಿತುರಿ 2ಕಪ್
- ಏಲಕ್ಕಿ ಪೌಡರ್ 1ಚಮಚ
- ಲವಂಗ 2-3
- ಒಣ ದ್ರಾಕ್ಷಿ
- ಗೇರುಬೀಜ
- ತುಪ್ಪ
ಮಾಡುವ ವಿಧಾನ :
- ಒಂದು ಪಾತ್ರೆಗೆ marrow ಮತ್ತು ನೀರನ್ನು ಹಾಕಿ 10 ನಿಮಿಷ ಕುದಿಸಿ.
- ಸಕ್ಕರೆಯನ್ನು ಹಾಕಿ ಇನ್ನೂ 5 ನಿಮಿಷ ಕುದಿಸಿ ಮತ್ತು ಅಕ್ಕಿ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕರಡಿ ಸೇರಿಸಿ.(ಇಲ್ಲದಿದ್ದರೆ ಪಾಯಸ ಗಂಟು ಬರಬಹುದು)
- ಕಾಯಿಯನ್ನು ರುಬ್ಬಿ ಕಾಯಿಹಾಲನ್ನು ತೆಗೆದು ಪಾಯಸಕ್ಕೆ ಸೇರಿಸಿ.
- ಲವಂಗ ಮತ್ತು ಏಲಕ್ಕಿಯನ್ನು ಹಾಕಿ.
- ಒಣದ್ರಾಕ್ಷಿ ಮತ್ತು ಗೇರುಬೀಜವನ್ನು ತುಪ್ಪದಲ್ಲಿ ಹುರಿದು ಪಾಯಸವನ್ನು ಅಲಂಕರಿಸಿ.
- ಈ ಪಾಯಸ ದೋಸೆ ಜೊತೆ ಅಥವಾ ಹೀಗೆಯೂ ಚೆನ್ನಾಗಿರುತ್ತದೆ.
No comments:
Post a Comment