ಒಣಕೆಮ್ಮಾದರೆ ಮೊದಲು ಮಾಡುವ "ಮನೆಮದ್ದು".ಇದನ್ನು ಒಂದು ವಾರ ಕುಡಿದರೆ ಕೆಮ್ಮು ಕಡಿಮೆ ಆಗೊತ್ತೆ ಅಂತ ಹೇಳುತ್ತಾರೆ.ಇದರಿಂದ ಯಾವುದೇ ತೊಂದರೆಯಾಗದು. ಕೆಮ್ಮೆ ಆಗ್ಬೇಕು ಅಂತೇನು ಇಲ್ಲ ಹೀಗೆ ಬೇಕಾದ್ರೂ ಮಾಡ್ಕೊಂಡು ಕುಡಿಬಹುದು.
ಬೇಕಾಗುವ ಸಾಮಗ್ರಿಗಳು:
ಬೇಕಾಗುವ ಸಾಮಗ್ರಿಗಳು:
- ಕೊತ್ತಂಬರಿ ಬೀಜ 4ಚಮಚ
- ಜೀರಿಗೆ 2ಚಮಚ
- ಬೆಲ್ಲ ರುಚಿಗೆ
- ಹಾಲು 1ಕಪ್
- ನೀರು 1/2ಕಪ್
- ಬಿಸಿನೀರಿನಲ್ಲಿ ಕೊತ್ತಂಬರಿ ಮತ್ತು ಜೀರಿಗೆಯನ್ನು 1ಗಂಟೆ ನೆನೆಸಿ.
- ನಂತರ ಸ್ವಲ್ಪ ನೀರಿನೊಂದಿಗೆ ನೆನೆಸಿದ ಸಾಮಗ್ರಿಗಳನ್ನು ರುಬ್ಬಿ.
- ರುಬ್ಬಿರುವದನ್ನು ಶೋಧಿಸಿ,ಅದಕ್ಕೆ ಹಾಲು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕರಡಿ.
- ಕೊತ್ತಂಬರಿ ಜೀರಿಗೆ ಹಾಲು ಕುಡಿಯಲು ಸಿದ್ಧ.
No comments:
Post a Comment