ನಮ್ಮ ಮನೆಯಲ್ಲಿ ಮೆಣಸಿನ ಮುಳ್ಕ ಸಾಧಾರಣವಾಗಿ ಮಾಡುತ್ತಿರುತ್ತಾರೆ. ಎಲ್ಲರಿಗೂ ಇಷ್ಟದ ಖಾದ್ಯ.ಆದರೆ ಅದಕ್ಕೆ ಕೆಮ್ಮುಂಡೆ ಹಣ್ಣಿನ ಬಿಳಿ ಭಾಗ ಬಳಸಿ ಯಾವತ್ತು ಮಾಡಿರಲಿಲ್ಲ.ನಾನು ಮಾಡಿನೋಡಿದೆ.ರುಚಿ ಚೆನ್ನಾಗಿತ್ತು. ಮಾಡುವ ವಿಧಾನ ಕೆಳಗಿನಂತಿದೆ.
Click here for English
ಬೇಕಾಗುವ ಸಾಮಗ್ರಿಗಳು:
Click here for English
ಬೇಕಾಗುವ ಸಾಮಗ್ರಿಗಳು:
- ಅಕ್ಕಿ 1ಕಪ್
- ಕೆಮ್ಮುಂಡೆ ಹಣ್ಣಿನ ಬಿಳಿ ಭಾಗ 1/2ಕಪ್ ಹೆಚ್ಚಿದ್ದು (optional)
- ಜೀರಿಗೆ 1ಚಮಚ
- ಕೊತ್ತಂಬರಿ 1ಚಮಚ
- ಒಣಮೆಣಸು 4-5
- ಕರಿಬೇವು ಸ್ವಲ್ಪ
- ಉಳ್ಳಾಗಡ್ಡೆ 1-2 ಸಣ್ಣಗೆ ಹೆಚ್ಚಿದ್ದು
- ಹಸಿಮೆಣಸು 1 ಹೆಚ್ಚಿದ್ದು
- ಕಾಯಿತುರಿ 2tsp
- ಎಣ್ಣೆ ಕರಿಯಲು
- ಉಪ್ಪು
- ಅಕ್ಕಿಯನ್ನು 2-3ಗಂಟೆ ನೆನೆಸಿ, ನಂತರ ಅಕ್ಕಿಯ ಜೊತೆ ಕೆಮ್ಮುಂಡೆ ಹಣ್ಣಿನ ಬಿಳಿ ಭಾಗ, ಜೀರಿಗೆ, ಕೊತ್ತಂಬರಿ, ಒಣಮೆಣಸು ಮತ್ತು ಕರಿಬೇವು ಹಾಕಿ ರುಬ್ಬಿ.(ನೀರು ಬೇಕಾಗುವದಿಲ್ಲ ಕೆಮ್ಮುಂಡೆ ಹಣ್ಣಿನ ನೀರು ಸಾಕು.)
- 1ಹುಟ್ಟು ರುಬ್ಬಿದ ಹಿಟ್ಟು ಮತ್ತು ಅದಕ್ಕೆ 1ಕಪ್ ನೀರು ಹಾಕಿ ಕುದಿಸಿ, ಕೈ ಬಿಡದೆ ಕರಡುತ್ತಿರಿ.ಹುಗ್ಗೆ ಆದ ನಂತರ,ತಣಿಯುವ ತನಕ ಕಾಯಿರಿ.
- ಎಣ್ಣೆ ಬಿಸಿಗಿಡಿ.ರುಬ್ಬಿದ ಹಿಟ್ಟಿಗೆ,ಹುಗ್ಗೆ,ಉಪ್ಪು,ಹಸಿಮೆಣಸು,ಉಳ್ಳಾಗಡ್ಡೆ ಮತ್ತು ಕಾಯಿತುರಿ ಹಾಕಿ ಚೆನ್ನಾಗಿ ಕಲಸಿ.ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣ,ಪಕೋಡ ರೀತಿ ಬಿಡಿ.
- ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವ ತನಕ ಕರಿಯಿರಿ.
- ಬಿಸಿ ಇದ್ದಾಗಲೇ ತಿನ್ನಿ.
- ಕೆಮ್ಮುಂಡೆ ಹಣ್ಣಿನ ಬದಲಾಗಿ ಮೊಗೆಕಾಯಿ,ಸೌತೆಕಾಯಿ ಕೂಡ ಬಳಸಬಹುದು.
- ಇದರಿಂದ ಸಿಹಿ ಮುಳ್ಕವನ್ನೂ ಮಾಡಬಹುದು.
No comments:
Post a Comment