ಬೇಕಾಗುವ ಸಾಮಗ್ರಿಗಳು:
- ಅಕ್ಕಿ 1ಕಪ್
- ಪುಟಾಣಿ ಬೇಳೆ 1/2ಕಪ್
- ಉದ್ದಿನ ಬೇಳೆ 1/4ಕಪ್
- ಉಪ್ಪು
- ಅರಿಶಿನ ಸ್ವಲ್ಪ
- ಓಮ ಕಾಳು 1-2tsp
- ಎಳ್ಳು 2tsp
- ಎಣ್ಣೆ ಕರಿಯಲು
- ಅಕ್ಕಿ,ಪುಟಾಣಿ,ಉದ್ದಿನ ಬೇಳೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.
- ಅಕ್ಕಿಯನ್ನು ಬೇರೆಯಾಗಿಯೇ ನುಣ್ಣಗೆ ಪುಡಿಮಾಡಿ.
- ನಂತರ ಪುಟಾಣಿ,ಉದ್ದನ್ನು ನುಣ್ಣಗೆ ಪುಡಿಮಾಡಿ.
- ಈಗ ಪುಡಿಮಾಡಿದ ಎಲ್ಲ ಹಿಟ್ಟು,ಓಮಕಾಳು,ಎಳ್ಳು,3tsp ಬಿಸಿ ಎಣ್ಣೆ,ಅರಶಿನ ಮತ್ತು ಉಪ್ಪನ್ನು ಒಂದು ಪಾತ್ರೆಗೆ ಹಾಕಿ,ಉಗುರು ಬೆಚ್ಚಗಿನ ನೀರಿನಿಂದ ಹಿಟ್ಟನ್ನು ಕಲಸಿ.
- ಎಣ್ಣೆ ಬಿಸಿಗಿಡಿ.
- ಚೆನ್ನಾಗಿ ನಾದಿ,ಚಕ್ಕುಲಿ ಮಟ್ಟಿನಲ್ಲಿ ಹಿಟ್ಟನ್ನು ತುಂಬಿ.
- ಎಣ್ಣೆ ಬಿಸಿಬಂದ ನಂತರ,ಚಕ್ಲಿ ಮೆಟ್ಟಿನ ಸಹಾಯದಿಂದ ಚಕ್ಲಿ ಮಾಡಿ ಎಣ್ಣೆಯಲ್ಲಿಬಿಡಿ.
- ನಿಮಗೆ ತಾಳ್ಮೆ ಇದೆ ಎಂದರೆ ಚಕ್ಕುಲಿಯ ನಿಜವಾದ ಆಕಾರಕೊಡಿ.ಇಲ್ಲವೆಂದರೆ ಹಾಗೇ ಮಾಡಿ.ರುಚಿ ಏನೂ ಬದಲಾಗುವದಿಲ್ಲ.
- ಸಣ್ಣ ಉರಿಯಲ್ಲಿ ಕರಿಯಿರಿ.ಹೊಂಬಣ್ಣ ಬರುವ ತನಕ ಕರಿದು ತೆಗೆದು,ತಣ್ಣಗಾಗಲು ಬಿಡಿ.
- ನಿಮ್ಮ ಜಗುಲಿಗೆ ಹೋಗಿ ಆರಾಮವಾಗಿ ಕೂತು,ನಿಮಗೆ ಯಾವ TV ಕಾರ್ಯಕ್ರಮ ಇಷ್ಟನೋ ನೋಡ್ತಾ ತಿನ್ನಿ.
No comments:
Post a Comment