Saturday, 26 November 2011

ಮಾವಿನಕಾಯಿ ಅಪ್ಪೆಹುಳಿ


To read it in English,click here
ಬೇಕಾಗುವ ಸಾಮಗ್ರಿಗಳು :
  • ಮಾವಿನಕಾಯಿ ದೊಡ್ಡದು ೧
  • ನೀರು ೧ ಗ್ಲಾಸ್ ನೀರು 
  • ಉಪ್ಪು 
  • ಸಕ್ಕರೆ ಅಥವಾ ಬೆಲ್ಲ 
  • ಎಣ್ಣೆ ೧-೨ ಚಮಚ 
  • ಒಣಮೆಣಸು ೧
  • ಹಸಿಮೆಣಸು ೨
  • ಬೆಳ್ಳುಳ್ಳಿ ಎಸಳು ೭-೮
  • ಇಂಗು 
  • ಸಾಸಿವೆ 
  • ಅರಿಶಿನ 
  • ಕರಿಬೇವು 
ಮಾಡುವ ವಿಧಾನ :
  • ಮಾವಿನಕಾಯಿಯನ್ನು ಬೇಯಿಸಿ ತಣ್ಣಗಾದ ನಂತರ ಕೈಯಿಂದ ನುರಿಯಿರಿ.ಗೊರಟೆಯನ್ನು ಏನುಮಾಡಬೇಕೆಂದು ಕೆಳಗಡೆ ಹೇಳಿರುತ್ತೇನೆ.
  • ಒಂದು ಪಾತ್ರೆಗೆ ನೀರನ್ನು ಹಾಕಿ,ಉಪ್ಪು ಮತ್ತು ಸಕ್ಕರೆ ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಕರಡಿ.
  • ಒಂದು ಒಗ್ಗರಣೆ ಹುಟ್ಟಿನಲ್ಲಿ ಎಣ್ಣೆ ಬಿಸಿಗಿಡಿ.ಎಣ್ಣೆ ಬಿಸಿ ಬಂದ ನಂತರ,
  • ಸಾಸಿವೆ ,ಇಂಗು ,ಒಣಮೆಣಸು, ಬೆಳ್ಳುಳ್ಳಿಅರಿಶಿನ,ಹಸಿಮೆಣಸು ,ಕರಿಬೇವಿನ ಒಗ್ಗರಣೆ ಕೊಡಿ.
  • ಮೆಣಸನ್ನು ಕೈಯಿಂದ ನುರಿಯಿರಿ.
  • ಈಗ ಗೊರಟೆಯನ್ನು ಕಸದ ಡಬ್ಬಿಗೆ ಎಸೆಯಿರಿ :)
  • ಮಾವಿನಕಾಯಿ ಅಪ್ಪೆಹುಳಿ ಸವಿಯಲು ಸಿದ್ಧ.

Thursday, 17 November 2011

ಸೌತೆಕಾಯಿ ದೋಸೆ


Click here for English
ಬೇಕಾಗುವ ಸಾಮಗ್ರಿಗಳು :
  • ಸೌತೆಕಾಯಿ ೨ಕಪ್ ಹೆಚ್ಚಿದ್ದು 
  • ಅಕ್ಕಿ ೨ಕಪ್ 
  • ಉಪ್ಪು 
  • ಎಣ್ಣೆ 
ಮಾಡುವ ವಿಧಾನ :
  • ಅಕ್ಕಿಯನ್ನು ನಾಲ್ಕು ಗಂಟೆ ನೆನೆಸಿ,ನಂತರ ತೊಳೆದು ಸೌತೆಕಾಯಿಯೊಂದಿಗೆ ನುಣ್ಣಗೆ ರುಬ್ಬಿ.(ಸೌತೆಕಾಯಿಗೆ ನೀರು ಇರುವದರಿಂದ ಬೇರೆ ನೀರು ಬೇಕಾಗುವದಿಲ್ಲ ಬೇಕಾದರೆ ಸ್ವಲ್ಪ ಬಳಸಿ  )
  •  ಹಿಟ್ಟಿಗೆ ಉಪ್ಪನ್ನು ಹಾಕಿ ಚೆನ್ನಾಗಿ ಕರಡಿ.
  • ದೋಸೆ ಕಾವಲಿ ಬಿಸಿಬಂದ ನಂತರ ಸೌಟಿನ ತುಂಬಾ ಹಿಟ್ಟು ತೆಗೆದುಕೊಂಡು ತೆಳ್ಳಗೆ ದೋಸೆ ಎರೆಯಿರಿ.
  • ಮುಚ್ಚಳವನ್ನು ಮುಚ್ಚಿ ೨ನಿಮಿಶ ಬೇಯಿಸಿ.(ಗರಿ ಗರಿ ದೋಸೆ ಬೇಕೆಂದರೆ,ಎಣ್ಣೆ ಹಚ್ಚದೆ ದೋಸೆ ಎರೆಯಿರಿ & ಸ್ವಲ್ಪ ಹೊತ್ತು ಹೆಚ್ಚು ಬಾಡಿಸಿ )

Wednesday, 9 November 2011

ಬಾಳೆಹಣ್ಣಿನ ಚಾಟಿ

ಬೇಕಾಗುವ ಸಾಮಗ್ರಿಗಳು :
  • ಅಕ್ಕಿ ೧ಕಪ್ 
  • ಬಾಳೆ ಹಣ್ಣು  ೨ 
  • ಉಪ್ಪು ರುಚಿಗೆ 
  • ಬೆಲ್ಲ ೨-೩ ಚಮಚ 
  • ಎಣ್ಣೆ 
     
    ಮಾಡುವ ವಿಧಾನ:
    • ಅಕ್ಕಿಯನ್ನು ೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
    • ನಂತರ ಅಕ್ಕಿ ತೊಳೆದು ನುಣ್ಣಗೆ ರುಬ್ಬಿ.
    • ಬಾಳೆ ಹಣ್ಣನ್ನು ಚೆನ್ನಾಗಿ mash ಮಾಡಿ,ಅದಕ್ಕೆ ಬೆಲ್ಲ,ಉಪ್ಪು,ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ.
    • ದೋಸೆ ಕಾವಲಿಯನ್ನು ಬಿಸಿಗಿಡಿ.
    • ಕಾವಲಿ ಬಿಸಿ ಬಂದ ತಕ್ಷಣ ಕಾವಲಿಗೆ ಎಣ್ಣೆ ಸವರಿ ದೋಸೆ ಎರೆಯಿರಿ.
    • ಮುಚ್ಚಳವನ್ನು ಮುಚ್ಚಿಡಿ.ಎರಡು ಬದಿಗೂ ಬೇಯಿಸಿ.

    Thursday, 3 November 2011

    ಮೆಂತ್ಯ ಸೊಪ್ಪಿನ ಅನ್ನ


    ಬೇಕಾಗುವ ಸಾಮಗ್ರಿಗಳು :
    • ಮೆಂತ್ಯ ಸೊಪ್ಪು ೧ ಕಟ್  ಹೆಚ್ಚಿದ್ದು
    • ಈರುಳ್ಳಿ ೧ ಉದ್ದಕ್ಕೆ ಹೆಚ್ಚಿದ್ದು 
    • ಹಸಿಮೆಣಸು ೨
    • ಕಾಯಿತುರಿ ೧/೪ ಕಪ್ 
    • ಬೆಳ್ಳುಳ್ಳಿ ೪-೫ ಎಸಳು 
    • ಶುಂಟಿ ಸಣ್ಣ ಚೂರು 
    • ಲವಂಗ ೩-೪ 
    • ಜೀರಿಗೆ ೧ ಚಮಚ 
    • ಎಣ್ಣೆ ೨-೩ ಚಮಚ 
    • ಅನ್ನ ಉದುರುದುರಾಗಿ ಬೇಯಿಸಿದ್ದು 1 ಬೌಲ್
    • ಉಪ್ಪು ರುಚಿಗೆ 
    ಮಾಡುವ ವಿಧಾನ :
    • ಕಾಯಿತುರಿ,ಹಸಿಮೆಣಸು,ಲವಂಗ,ಶುಂಟಿ ಮತ್ತು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
    • ಒಂದು ಪಾತ್ರೆಯಲ್ಲಿ ೩ ಚಮಚ ಎಣ್ಣೆಯನ್ನು ಬಿಸಿಗಿಡಿ.ಎಣ್ಣೆ ಬಿಸಿಬಂದ ನಂತರ,ಜೀರಿಗೆಯನ್ನು ಹಾಕಿ,ನಂತರ ಈರುಳ್ಳಿ ಯನ್ನು ಹಾಕಿ ಈರುಳ್ಳಿ ಕೆಂಪಗೆ ಆಗುವ ತನಕ ಹುರಿಯಿರಿ.
    • ನಂತರ ಮೆಂತ್ಯ ಸೊಪ್ಪನ್ನು ಹಾಕಿ ಒಂದು ನಿಮಿಷ ಹುರಿಯಿರಿ.
    • ಅದಕ್ಕೆ ರುಬ್ಬಿಟ್ಟ ಮಿಶ್ರಣವನ್ನು ಹಾಕಿ ಹಸಿ ವಾಸನೆ ಹೋಗುವ ತನಕ ಕಾಯಿರಿ ನಂತರ ಅದಕ್ಕೆ ಅನ್ನ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ.
    • ಇದು ಮೊಸರಿನೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.