Wednesday, 9 November 2011

ಬಾಳೆಹಣ್ಣಿನ ಚಾಟಿ

ಬೇಕಾಗುವ ಸಾಮಗ್ರಿಗಳು :
  • ಅಕ್ಕಿ ೧ಕಪ್ 
  • ಬಾಳೆ ಹಣ್ಣು  ೨ 
  • ಉಪ್ಪು ರುಚಿಗೆ 
  • ಬೆಲ್ಲ ೨-೩ ಚಮಚ 
  • ಎಣ್ಣೆ 
     
    ಮಾಡುವ ವಿಧಾನ:
    • ಅಕ್ಕಿಯನ್ನು ೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
    • ನಂತರ ಅಕ್ಕಿ ತೊಳೆದು ನುಣ್ಣಗೆ ರುಬ್ಬಿ.
    • ಬಾಳೆ ಹಣ್ಣನ್ನು ಚೆನ್ನಾಗಿ mash ಮಾಡಿ,ಅದಕ್ಕೆ ಬೆಲ್ಲ,ಉಪ್ಪು,ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ.
    • ದೋಸೆ ಕಾವಲಿಯನ್ನು ಬಿಸಿಗಿಡಿ.
    • ಕಾವಲಿ ಬಿಸಿ ಬಂದ ತಕ್ಷಣ ಕಾವಲಿಗೆ ಎಣ್ಣೆ ಸವರಿ ದೋಸೆ ಎರೆಯಿರಿ.
    • ಮುಚ್ಚಳವನ್ನು ಮುಚ್ಚಿಡಿ.ಎರಡು ಬದಿಗೂ ಬೇಯಿಸಿ.

    No comments:

    Post a Comment