ಬೇಕಾಗುವ ಸಾಮಗ್ರಿಗಳು :
- ಮೆಂತ್ಯ ಸೊಪ್ಪು ೧ ಕಟ್ ಹೆಚ್ಚಿದ್ದು
- ಈರುಳ್ಳಿ ೧ ಉದ್ದಕ್ಕೆ ಹೆಚ್ಚಿದ್ದು
- ಹಸಿಮೆಣಸು ೨
- ಕಾಯಿತುರಿ ೧/೪ ಕಪ್
- ಬೆಳ್ಳುಳ್ಳಿ ೪-೫ ಎಸಳು
- ಶುಂಟಿ ಸಣ್ಣ ಚೂರು
- ಲವಂಗ ೩-೪
- ಜೀರಿಗೆ ೧ ಚಮಚ
- ಎಣ್ಣೆ ೨-೩ ಚಮಚ
- ಅನ್ನ ಉದುರುದುರಾಗಿ ಬೇಯಿಸಿದ್ದು 1 ಬೌಲ್
- ಉಪ್ಪು ರುಚಿಗೆ
- ಕಾಯಿತುರಿ,ಹಸಿಮೆಣಸು,ಲವಂಗ,ಶುಂಟಿ ಮತ್ತು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ೩ ಚಮಚ ಎಣ್ಣೆಯನ್ನು ಬಿಸಿಗಿಡಿ.ಎಣ್ಣೆ ಬಿಸಿಬಂದ ನಂತರ,ಜೀರಿಗೆಯನ್ನು ಹಾಕಿ,ನಂತರ ಈರುಳ್ಳಿ ಯನ್ನು ಹಾಕಿ ಈರುಳ್ಳಿ ಕೆಂಪಗೆ ಆಗುವ ತನಕ ಹುರಿಯಿರಿ.
- ನಂತರ ಮೆಂತ್ಯ ಸೊಪ್ಪನ್ನು ಹಾಕಿ ಒಂದು ನಿಮಿಷ ಹುರಿಯಿರಿ.
- ಅದಕ್ಕೆ ರುಬ್ಬಿಟ್ಟ ಮಿಶ್ರಣವನ್ನು ಹಾಕಿ ಹಸಿ ವಾಸನೆ ಹೋಗುವ ತನಕ ಕಾಯಿರಿ ನಂತರ ಅದಕ್ಕೆ ಅನ್ನ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ.
- ಇದು ಮೊಸರಿನೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.
No comments:
Post a Comment