Saturday, 26 November 2011

ಮಾವಿನಕಾಯಿ ಅಪ್ಪೆಹುಳಿ


To read it in English,click here
ಬೇಕಾಗುವ ಸಾಮಗ್ರಿಗಳು :
  • ಮಾವಿನಕಾಯಿ ದೊಡ್ಡದು ೧
  • ನೀರು ೧ ಗ್ಲಾಸ್ ನೀರು 
  • ಉಪ್ಪು 
  • ಸಕ್ಕರೆ ಅಥವಾ ಬೆಲ್ಲ 
  • ಎಣ್ಣೆ ೧-೨ ಚಮಚ 
  • ಒಣಮೆಣಸು ೧
  • ಹಸಿಮೆಣಸು ೨
  • ಬೆಳ್ಳುಳ್ಳಿ ಎಸಳು ೭-೮
  • ಇಂಗು 
  • ಸಾಸಿವೆ 
  • ಅರಿಶಿನ 
  • ಕರಿಬೇವು 
ಮಾಡುವ ವಿಧಾನ :
  • ಮಾವಿನಕಾಯಿಯನ್ನು ಬೇಯಿಸಿ ತಣ್ಣಗಾದ ನಂತರ ಕೈಯಿಂದ ನುರಿಯಿರಿ.ಗೊರಟೆಯನ್ನು ಏನುಮಾಡಬೇಕೆಂದು ಕೆಳಗಡೆ ಹೇಳಿರುತ್ತೇನೆ.
  • ಒಂದು ಪಾತ್ರೆಗೆ ನೀರನ್ನು ಹಾಕಿ,ಉಪ್ಪು ಮತ್ತು ಸಕ್ಕರೆ ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಕರಡಿ.
  • ಒಂದು ಒಗ್ಗರಣೆ ಹುಟ್ಟಿನಲ್ಲಿ ಎಣ್ಣೆ ಬಿಸಿಗಿಡಿ.ಎಣ್ಣೆ ಬಿಸಿ ಬಂದ ನಂತರ,
  • ಸಾಸಿವೆ ,ಇಂಗು ,ಒಣಮೆಣಸು, ಬೆಳ್ಳುಳ್ಳಿಅರಿಶಿನ,ಹಸಿಮೆಣಸು ,ಕರಿಬೇವಿನ ಒಗ್ಗರಣೆ ಕೊಡಿ.
  • ಮೆಣಸನ್ನು ಕೈಯಿಂದ ನುರಿಯಿರಿ.
  • ಈಗ ಗೊರಟೆಯನ್ನು ಕಸದ ಡಬ್ಬಿಗೆ ಎಸೆಯಿರಿ :)
  • ಮಾವಿನಕಾಯಿ ಅಪ್ಪೆಹುಳಿ ಸವಿಯಲು ಸಿದ್ಧ.

No comments:

Post a Comment