Thursday, 17 November 2011

ಸೌತೆಕಾಯಿ ದೋಸೆ


Click here for English
ಬೇಕಾಗುವ ಸಾಮಗ್ರಿಗಳು :
  • ಸೌತೆಕಾಯಿ ೨ಕಪ್ ಹೆಚ್ಚಿದ್ದು 
  • ಅಕ್ಕಿ ೨ಕಪ್ 
  • ಉಪ್ಪು 
  • ಎಣ್ಣೆ 
ಮಾಡುವ ವಿಧಾನ :
  • ಅಕ್ಕಿಯನ್ನು ನಾಲ್ಕು ಗಂಟೆ ನೆನೆಸಿ,ನಂತರ ತೊಳೆದು ಸೌತೆಕಾಯಿಯೊಂದಿಗೆ ನುಣ್ಣಗೆ ರುಬ್ಬಿ.(ಸೌತೆಕಾಯಿಗೆ ನೀರು ಇರುವದರಿಂದ ಬೇರೆ ನೀರು ಬೇಕಾಗುವದಿಲ್ಲ ಬೇಕಾದರೆ ಸ್ವಲ್ಪ ಬಳಸಿ  )
  •  ಹಿಟ್ಟಿಗೆ ಉಪ್ಪನ್ನು ಹಾಕಿ ಚೆನ್ನಾಗಿ ಕರಡಿ.
  • ದೋಸೆ ಕಾವಲಿ ಬಿಸಿಬಂದ ನಂತರ ಸೌಟಿನ ತುಂಬಾ ಹಿಟ್ಟು ತೆಗೆದುಕೊಂಡು ತೆಳ್ಳಗೆ ದೋಸೆ ಎರೆಯಿರಿ.
  • ಮುಚ್ಚಳವನ್ನು ಮುಚ್ಚಿ ೨ನಿಮಿಶ ಬೇಯಿಸಿ.(ಗರಿ ಗರಿ ದೋಸೆ ಬೇಕೆಂದರೆ,ಎಣ್ಣೆ ಹಚ್ಚದೆ ದೋಸೆ ಎರೆಯಿರಿ & ಸ್ವಲ್ಪ ಹೊತ್ತು ಹೆಚ್ಚು ಬಾಡಿಸಿ )

No comments:

Post a Comment