- ಮಾವಿನ ಹಣ್ಣು ೧
- ಕಾಯಿ ತುರಿ 1 ½ ಕಪ್
- ಏಲಕ್ಕಿ ೨
- ಉಪ್ಪು
- ಸಕ್ಕರೆ
ಮಾಡುವ ವಿಧಾನ :
- ಮಿಕ್ಸಿಗೆ ಕಾಯಿತುರಿ,ಏಲಕ್ಕಿ ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
- ಮಾವಿನ ಹಣ್ಣಿನ ಸಿಪ್ಪೆ ತೆಗೆದು ಹೆಚ್ಚಿ.
- ಹೆಚ್ಚಿದ ಮಾವಿನ ಹಣ್ಣಿಗೆ 5 -6 tsp ರಷ್ಟು ಸಕ್ಕರೆ, ಚಿಟಿಕೆ ಉಪ್ಪು ಮತ್ತು ರುಬ್ಬಿದ ಮಿಶ್ರಣವನ್ನು ಹಾಕಿ.
- ಸ್ವಲ್ಪ ನೀರನ್ನು ಬೇಕಾದರೆ ಹಾಕಿ ಚೆನ್ನಾಗಿ ಕರಡಿ.(ದಪ್ಪದಾಗಿಯೇ ಇರಲಿ )
- ಇದನ್ನು ಪುರಿ or ದೋಸೆಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
- ಮೈದಾ ಹಿಟ್ಟು ೧ಕಪ್
- ಓಮ ಕಾಳು ೧-೨ಚಮಚ
- ಖಾರದ ಪುಡಿ ೩ -೪ ಚಮಚ
- ಉಪ್ಪು
- ಎಣ್ಣೆ
- ನೀರು
ಮಾಡುವ ವಿಧಾನ :
- ಒಂದು ಪಾತ್ರೆಗೆ ಮೈದಾ ಹಿಟ್ಟು,ಓಮ ಕಾಳು,ಖಾರದ ಪುಡಿ,ಉಪ್ಪು ಮತ್ತು ೨ಚಮಚ ಬಿಸಿ ಎಣ್ಣೆ ಹಾಕಿ,ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
- ಹಿಟ್ಟಿನ ಒಂದು ಉಂಡೆಯನ್ನು ತೆಗೆದುಕೊಂಡು,ಚಪಾತಿಯನ್ನು ಲಟ್ಟಿಸಿ. ಚಪಾತಿ ಸ್ವಲ್ಪ ದಪ್ಪ ಇರಲಿ(abt2cm ).
- ಶಂಕರಪೋಳೆ cutter or pizza cutter ಬಳಸಿ,dimond ಆಕಾರದಲ್ಲಿ ಕತ್ತರಿಸಿ.
- ಸಣ್ಣ ಉರಿಯಲ್ಲಿ ಈ pieces ಅನ್ನು ಕಾದ ಎಣ್ಣೆಯಲ್ಲಿ ಕರಿಯಿರಿ.
- ಖಾರ ಶಂಕರಪೋಳೆ ಸಿದ್ಧ .
- ಕಡ್ಲೆ ಬೇಳೆ ೧ ಕಪ್
- ಸಕ್ಕರೆ ೧ ಕಪ್
- ಏಲಕ್ಕಿ ಪೌಡರ್ 1tsp
- ಮೈದಾ ಹಿಟ್ಟು 1 ೧/೨ ಕಪ್
- ಅಕ್ಕಿ ಹಿಟ್ಟು ೧ಚಮಚ
- ರವೆ ೧ಚಮಚ
- ಅರಿಶಿನ ಚಿಟಿಕೆ
- ಉಪ್ಪು
- ಎಣ್ಣೆ
ಮಾಡುವ ವಿಧಾನ :
ಕನಕ
- ಮೈದಾ ಹಿಟ್ಟು ,ಅಕ್ಕಿ ಹಿಟ್ಟು ,ರವಾ,ಅರಿಶಿನ,ಎಣ್ಣೆಯನ್ನು ಹಾಕಿ,ನೀರನ್ನು ಸ್ವಲ್ಪ ಸ್ವಲ್ಪ ಬಳಸುತ್ತಾ,ಚಪಾತಿ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ.(೨೦ ನಿಮಿಷ ಹಾಗೆ ಬಿಡಿ)
- ನಂತರ ಉಂಡೆಯನ್ನು ಕಟ್ಟಿಟ್ಟುಕೊಳ್ಳಿ.
ಹೂರಣ
- ಕಡಲೆ ಬೇಳೆಯನ್ನು ಬೇಯಿಸಿ,ಅದರಿಂದ ನೀರನ್ನು ಬೇರ್ಪಡಿಸಿ ,ಪುಡಿ ಮಾಡಿಟ್ಟುಕೊಳ್ಳಿ.
- ಕಡ್ಲೆ ಪುಡಿಗೆ ಸಕ್ಕರೆ ಹಾಕಿ,ಚೆನ್ನಾಗಿ ಪಾಕ ಬರುವ ತನಕ ಕಾಯಿಸಿ.
- ನಂತರ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಬಿಸಿ ತಣಿಯುವ ತನಕ ಕಾದು,ನಿಂಬೆ ಆಕಾರದ ಉಂಡೆಯನ್ನು ಕಟ್ಟಿಟ್ಟುಕೊಳ್ಳಿ.
- ನಂತರ ಕನಕದ ಉಂಡೆಯನ್ನು ತೆಗೆದುಕೊಂಡು ಲಟ್ಟಿಸಿ, ಅದರೊಳಗೆ ಹೂರಣದ ಉಂಡೆಯನ್ನು ತುಂಬಿ,ಅದನ್ನು ಚಪಾತಿಯಂತೆ ಲಟ್ಟಿಸಿ.(ಲಟ್ಟಿಸುವಾಗ,ಪ್ಲಾಸ್ಟಿಕ್ or ಬಾಳೆ ಎಲೆ,ಎಣ್ಣೆ ಬಳಸಿ )
- ತವಾ ಬಿಸಿಯಾದ ನಂತರ, ಹೋಳಿಗೆಯನ್ನು ಎರಡೂ ಬದಿಗೂ ಚೆನ್ನಾಗಿ ಬೇಯಿಸಿ.
- ಹಾಗಲಕಾಯಿ 1 /2 ಹೆಚ್ಚಿದ್ದು
- ಕಾಯಿತುರಿ 1ಕಪ್
- ಉದ್ದಿನ ಬೇಳೆ 2tsp
- ಕಡಲೆ ಬೇಳೆ 2tsp
- ಒಣಮೆಣಸು 6
- ಕೊತ್ತಂಬರಿ 2tsp
- ಅರಿಶಿನ ಚಿಟಿಕೆ
- ಎಣ್ಣೆ 4tsp
- ಉಪ್ಪು
- ಬೆಲ್ಲ or ಸಕ್ಕರೆ
ಮಾಡುವ ವಿಧಾನ :
- ಎಣ್ಣೆ ಕಾದ ನಂತರ,ಉದ್ದಿನ ಬೇಳೆ, ಕಡಲೆ ಬೇಳೆ, ಒಣಮೆಣಸು,ಕೊತ್ತಂಬರಿ, ಅರಿಶಿನ ಚಿಟಿಕೆ ೨ನಿಮಿಶ ಸಣ್ಣ ಉರಿಯಲ್ಲಿ ಹುರಿದು,ಮಿಕ್ಸಿ ಜಾರಿಗೆ ಹಾಕಿ.
- ನಂತರ 2tsp ಎಣ್ಣೆಯೊಂದಿಗೆ ಹೆಚ್ಚಿದ ಹಾಗಲಕಾಯಿಯನ್ನು ಚೆನ್ನಾಗಿ ಹುರಿದು,ಅದನ್ನು ಮಿಕ್ಸಿ ಜಾರಿಗೆ ಹಾಕಿ.
- ನಂತರ ಮೇಲೆ ಹಾಕಿಟ್ಟ ಮಿಶ್ರಣದೊಂದಿಗೆ,ಕಾಯಿತುರಿ, ಉಪ್ಪು,ಬೆಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ.
- ಹಾಗಲಕಾಯಿ ಚಟ್ನಿ ಸಿದ್ಧ.
Click here for English
ಬೇಕಾಗುವ ಸಾಮಗ್ರಿಗಳು :
- ಲಿಂಬು ೨
- ನೀರು ೧ ಗ್ಲಾಸ್ ನೀರು
- ಉಪ್ಪು
- ಸಕ್ಕರೆ ಅಥವಾ ಬೆಲ್ಲ
- ಎಣ್ಣೆ ೧-೨ ಚಮಚ
- ಒಣಮೆಣಸು ೧
- ಹಸಿಮೆಣಸು ೨
- ಬೆಳ್ಳುಳ್ಳಿ ಎಸಳು ೭-೮
- ಇಂಗು
- ಸಾಸಿವೆ
- ಅರಿಶಿನ
- ಕರಿಬೇವು
ಮಾಡುವ ವಿಧಾನ :
- ಒಂದು ಪಾತ್ರೆಗೆ ನೀರನ್ನು ಹಾಕಿ,ಲಿಂಬು ರಸವನ್ನು ಹಿಂಡಿ.
- ಉಪ್ಪು ಮತ್ತು ಸಕ್ಕರೆ ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಕರಡಿ.
- ಒಂದು ಒಗ್ಗರಣೆ ಹುಟ್ಟಿನಲ್ಲಿ ಎಣ್ಣೆ ಬಿಸಿಗಿಡಿ.ಎಣ್ಣೆ ಬಿಸಿ ಬಂದ ನಂತರ,
- ಸಾಸಿವೆ ,ಇಂಗು ,ಒಣಮೆಣಸು, ಬೆಳ್ಳುಳ್ಳಿಅರಿಶಿನ,ಹಸಿಮೆಣಸು ,ಕರಿಬೇವಿನ ಒಗ್ಗರಣೆ ಕೊಡಿ.
- ಮೆಣಸನ್ನು ಕೈಯಿಂದ ನುರಿಯಿರಿ.
- ಲಿಂಬು ಅಪ್ಪೆಹುಳಿ ಸಿದ್ಧ.
- ಹೀರೆಕಾಯಿ ೧
- ಕಾಯಿತುರಿ ೧ ಕಪ್
- ಮೊಸರು ೧ ಕಪ್
- ಹಸಿಮೆಣಸು ೧ ಸಣ್ಣಗೆ ಹೆಚ್ಚಿದ್ದು
- ಈರುಳ್ಳಿ ೧/೨ ಸಣ್ಣಗೆ ಹೆಚ್ಚಿದ್ದು
- ಒಣಮೆಣಸು ೧ ಕಟ್ ಮಾಡಿಟ್ಟಿದ್ದು
- ಎಣ್ಣೆ ೧ ಚಮಚ
- ಸಾಸಿವೆ ಕಾಳು ೧/೨ ಚಮಚ
- ಇಂಗು ಚಿಟಿಕೆ
- ಅರಿಶಿನ ಚಿಟಿಕೆ
- ಉಪ್ಪು
- ಸಕ್ಕರೆ ಚಿಟಿಕೆ
ಮಾಡುವ ವಿಧಾನ :
- ಹೀರೆಕಾಯಿ ಸಿಪ್ಪೆ ತೆಗೆದು ಹೆಚ್ಚಿ,ಬೇಯಿಸಿಟ್ಟುಕೊಳ್ಳಿ.
- ಕಾಯಿತುರಿಯನ್ನು ನುಣ್ಣನೆ ರುಬ್ಬಿಟ್ಟುಕೊಳ್ಳಿ.
- ಬೇಯಿಸಿದ ಹೀರೆಕಾಯಿಗೆ,ರುಬ್ಬಿದ ಮಿಶ್ರಣ,ಮೊಸರು,ಈರುಳ್ಳಿ,ಹಸಿಮೆಣಸು,ಸಕ್ಕರೆ ಮತ್ತು ಉಪ್ಪು ಹಾಕಿ,ಚೆನ್ನಾಗಿ ಕರಡಿ.
- ನಂತರ ಇದಕ್ಕೆ ಎಣ್ಣೆ,ಸಾಸಿವೆ,ಇಂಗು,ಒಣಮೆಣಸು,ಅರಶಿನದ ಒಗ್ಗರಣೆ ಕೊಡಿ.
- ಹೀರೆಕಾಯಿ ಬಜ್ಜಿ ಅಥವಾ ಹಶಿ ಸಿದ್ಧ.