ತಯಾರಿಸಲು ಬೇಕಾಗುವ ಸಮಯ:10-15ನಿಮಿಷ
ಬೇಕಾಗುವ ಸಾಮಗ್ರಿಗಳು:
- ವಾತಂಗಿ ಸೊಪ್ಪು 10-15
- ಕಾಯಿತುರಿ 1ಕಪ್
- ಉಪ್ಪು
- ಹುಣಸೆ ಹಣ್ಣು ಒಂದು ಸಣ್ಣ ನಿಂಬೆ ಗಾತ್ರದ್ದು.
- ಬೆಲ್ಲ 1ಚಮಚ
- ಎಣ್ಣೆ
- ಒಣ ಮೆಣಸು 6-8
- ಕುತುಂಬರಿ 2 ಚಮಚ
- ಕಡ್ಲೆ ಬೇಳೆ 1 ಚಮಚ
- ಉದ್ದಿನ ಬೇಳೆ 1 ಚಮಚ
ಮಾಡುವ ವಿಧಾನ:
- ಒಂದು ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಬಿಸಿ ಬಂದ ನಂತರ,ಅದಕ್ಕೆ ವಾತಂಗಿ ಸೊಪ್ಪನ್ನು ಹಾಕಿ ಹೊರಿಯಿರಿ.ಅದನ್ನು ಮಿಕ್ಸಿಗೆ ಹಾಕಿಡಿ.
- ನಂತರ,2ಚಮಚ ಎಣ್ಣೆ ಬಿಸಿ ಆದ ನಂತರ ಅದಕ್ಕೆ,ಕಡ್ಲೆ ಬೇಳೆ,ಉದ್ದಿನ ಬೇಳೆ,ಕುತುಂಬರಿ,ಒಣಮೆಣಸು ಹಾಕಿ ಹೊರಿದು,ಮಿಕ್ಸಿಗೆ ಹಾಕಿ ಕಾಯಿತುರಿ,ಹುಣಸೆ ಹಣ್ಣು,ಬೆಲ್ಲ,ನೀರು ಸೇರಿಸಿ ರುಬ್ಬಿ.
- ವಾತಂಗಿ ಸೊಪ್ಪಿನ ಚಟ್ನಿ ಬಿಸಿ ಬಿಸಿ ಅನ್ನ ಮತ್ತು ಮೊಸರಿನೊಂದಿಗೆ ಸವಿಯಲು ಚೆನ್ನಾಗಿರುತ್ತದೆ.
No comments:
Post a Comment