Thursday, 16 August 2012

Honeydew Melon dosa

 Click here for English
 ಬೇಕಾಗುವ ಸಾಮಗ್ರಿಗಳು :
  • Honeydew melon  1ಕಪ್ 
  • ಅಕ್ಕಿ 2ಕಪ್ 
  • ಬೆಲ್ಲ 
  • ಉಪ್ಪು 
  • ಎಣ್ಣೆ  
ಮಾಡುವ ವಿಧಾನ :
  • ಅಕ್ಕಿಯನ್ನು ನೀರಿನಲ್ಲಿ 5-6ತಾಸು ನೆನೆಸಿ.
  • ಅಕ್ಕಿಯನ್ನು ತೊಳೆದು,honeydew melon ಜೊತೆ ರುಬ್ಬಿ.
  • 1ಹುಟ್ಟು ರುಬ್ಬಿದ ಹಿಟ್ಟು ಮತ್ತು ಅದಕ್ಕೆ 1ಕಪ್ ನೀರು ಹಾಕಿ ಕುದಿಸಿ, ಕೈ ಬಿಡದೆ ಕರಡುತ್ತಿರಿ.ಹುಗ್ಗೆ ಆದ ನಂತರ,ತಣಿಯುವ ತನಕ ಕಾಯಿರಿ.
  • ಹುಗ್ಗೆಯನ್ನು ಹಿಟ್ಟಿಗೆ ಹಾಕಿ ಕರಡಿ,ಉಪ್ಪು ಮತ್ತು ಬೆಲ್ಲ ಹಾಕಿ ಚೆನ್ನಾಗಿ ಕರಡಿ ಈಗ ಹಿಟ್ಟು ಸಿದ್ಧ.
  • ದೋಸೆ ಕಾವಲಿಯನ್ನು ಬಿಸಿಗಿಟ್ಟು ಎಣ್ಣೆ ಹಚ್ಚಿ, ಬಿಸಿಬಂದ ನಂತರ ತೆಳ್ಳಗಿನ ದೋಸೆ ಎರೆಯಿರಿ.
  •  ದೋಸೆ ತೆಗೆದು ನಿಮಗಿಷ್ಟದ  ಚಟ್ನಿ or ತುಪ್ಪದ ಜೊತೆ ಸವಿಯಿರಿ.

Friday, 13 July 2012

ಚಕ್ಕುಲಿ


ಬೇಕಾಗುವ ಸಾಮಗ್ರಿಗಳು: 
  • ಅಕ್ಕಿ 1ಕಪ್ 
  • ಪುಟಾಣಿ ಬೇಳೆ 1/2ಕಪ್ 
  • ಉದ್ದಿನ ಬೇಳೆ  1/4ಕಪ್ 
  • ಉಪ್ಪು 
  • ಅರಿಶಿನ ಸ್ವಲ್ಪ 
  • ಓಮ ಕಾಳು 1-2tsp 
  • ಎಳ್ಳು 2tsp 
  • ಎಣ್ಣೆ ಕರಿಯಲು 
ಮಾಡುವ ವಿಧಾನ:
  • ಅಕ್ಕಿ,ಪುಟಾಣಿ,ಉದ್ದಿನ ಬೇಳೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.
  • ಅಕ್ಕಿಯನ್ನು ಬೇರೆಯಾಗಿಯೇ ನುಣ್ಣಗೆ ಪುಡಿಮಾಡಿ.
  • ನಂತರ ಪುಟಾಣಿ,ಉದ್ದನ್ನು ನುಣ್ಣಗೆ ಪುಡಿಮಾಡಿ.
  • ಈಗ ಪುಡಿಮಾಡಿದ ಎಲ್ಲ ಹಿಟ್ಟು,ಓಮಕಾಳು,ಎಳ್ಳು,3tsp ಬಿಸಿ ಎಣ್ಣೆ,ಅರಶಿನ ಮತ್ತು ಉಪ್ಪನ್ನು ಒಂದು ಪಾತ್ರೆಗೆ ಹಾಕಿ,ಉಗುರು ಬೆಚ್ಚಗಿನ ನೀರಿನಿಂದ ಹಿಟ್ಟನ್ನು ಕಲಸಿ.
  • ಎಣ್ಣೆ ಬಿಸಿಗಿಡಿ.
  • ಚೆನ್ನಾಗಿ ನಾದಿ,ಚಕ್ಕುಲಿ ಮಟ್ಟಿನಲ್ಲಿ ಹಿಟ್ಟನ್ನು ತುಂಬಿ.
  • ಎಣ್ಣೆ ಬಿಸಿಬಂದ ನಂತರ,ಚಕ್ಲಿ ಮೆಟ್ಟಿನ ಸಹಾಯದಿಂದ ಚಕ್ಲಿ ಮಾಡಿ ಎಣ್ಣೆಯಲ್ಲಿಬಿಡಿ.
  • ನಿಮಗೆ ತಾಳ್ಮೆ ಇದೆ ಎಂದರೆ ಚಕ್ಕುಲಿಯ ನಿಜವಾದ ಆಕಾರಕೊಡಿ.ಇಲ್ಲವೆಂದರೆ ಹಾಗೇ ಮಾಡಿ.ರುಚಿ ಏನೂ ಬದಲಾಗುವದಿಲ್ಲ.
  • ಸಣ್ಣ ಉರಿಯಲ್ಲಿ ಕರಿಯಿರಿ.ಹೊಂಬಣ್ಣ ಬರುವ ತನಕ ಕರಿದು ತೆಗೆದು,ತಣ್ಣಗಾಗಲು ಬಿಡಿ.
  • ನಿಮ್ಮ ಜಗುಲಿಗೆ ಹೋಗಿ ಆರಾಮವಾಗಿ ಕೂತು,ನಿಮಗೆ ಯಾವ TV ಕಾರ್ಯಕ್ರಮ ಇಷ್ಟನೋ ನೋಡ್ತಾ ತಿನ್ನಿ.

Wednesday, 11 July 2012

ಕೊತ್ತಂಬರಿ ಜೀರಿಗೆ ಹಾಲು

ಒಣಕೆಮ್ಮಾದರೆ ಮೊದಲು ಮಾಡುವ "ಮನೆಮದ್ದು".ಇದನ್ನು ಒಂದು ವಾರ ಕುಡಿದರೆ ಕೆಮ್ಮು ಕಡಿಮೆ ಆಗೊತ್ತೆ ಅಂತ ಹೇಳುತ್ತಾರೆ.ಇದರಿಂದ ಯಾವುದೇ ತೊಂದರೆಯಾಗದು. ಕೆಮ್ಮೆ ಆಗ್ಬೇಕು ಅಂತೇನು ಇಲ್ಲ ಹೀಗೆ ಬೇಕಾದ್ರೂ ಮಾಡ್ಕೊಂಡು ಕುಡಿಬಹುದು.
ಬೇಕಾಗುವ ಸಾಮಗ್ರಿಗಳು:
  • ಕೊತ್ತಂಬರಿ ಬೀಜ 4ಚಮಚ 
  • ಜೀರಿಗೆ 2ಚಮಚ 
  • ಬೆಲ್ಲ ರುಚಿಗೆ 
  • ಹಾಲು 1ಕಪ್ 
  • ನೀರು 1/2ಕಪ್ 
ಮಾಡುವ ವಿಧಾನ:
  • ಬಿಸಿನೀರಿನಲ್ಲಿ ಕೊತ್ತಂಬರಿ ಮತ್ತು ಜೀರಿಗೆಯನ್ನು 1ಗಂಟೆ ನೆನೆಸಿ.
  • ನಂತರ ಸ್ವಲ್ಪ ನೀರಿನೊಂದಿಗೆ ನೆನೆಸಿದ ಸಾಮಗ್ರಿಗಳನ್ನು ರುಬ್ಬಿ.
  • ರುಬ್ಬಿರುವದನ್ನು ಶೋಧಿಸಿ,ಅದಕ್ಕೆ ಹಾಲು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕರಡಿ.
  • ಕೊತ್ತಂಬರಿ ಜೀರಿಗೆ ಹಾಲು ಕುಡಿಯಲು ಸಿದ್ಧ.

Monday, 9 July 2012

ಮೆಣಸಿನ ಮುಳ್ಕ

ನಮ್ಮ ಮನೆಯಲ್ಲಿ ಮೆಣಸಿನ ಮುಳ್ಕ ಸಾಧಾರಣವಾಗಿ ಮಾಡುತ್ತಿರುತ್ತಾರೆ. ಎಲ್ಲರಿಗೂ ಇಷ್ಟದ ಖಾದ್ಯ.ಆದರೆ ಅದಕ್ಕೆ ಕೆಮ್ಮುಂಡೆ ಹಣ್ಣಿನ ಬಿಳಿ ಭಾಗ ಬಳಸಿ ಯಾವತ್ತು ಮಾಡಿರಲಿಲ್ಲ.ನಾನು ಮಾಡಿನೋಡಿದೆ.ರುಚಿ ಚೆನ್ನಾಗಿತ್ತು. ಮಾಡುವ ವಿಧಾನ ಕೆಳಗಿನಂತಿದೆ.


Click here for English
ಬೇಕಾಗುವ ಸಾಮಗ್ರಿಗಳು:
  • ಅಕ್ಕಿ 1ಕಪ್ 
  • ಕೆಮ್ಮುಂಡೆ ಹಣ್ಣಿನ ಬಿಳಿ ಭಾಗ 1/2ಕಪ್ ಹೆಚ್ಚಿದ್ದು (optional)
  • ಜೀರಿಗೆ 1ಚಮಚ 
  • ಕೊತ್ತಂಬರಿ 1ಚಮಚ 
  • ಒಣಮೆಣಸು 4-5 
  • ಕರಿಬೇವು  ಸ್ವಲ್ಪ 
  • ಉಳ್ಳಾಗಡ್ಡೆ 1-2 ಸಣ್ಣಗೆ ಹೆಚ್ಚಿದ್ದು 
  • ಹಸಿಮೆಣಸು 1 ಹೆಚ್ಚಿದ್ದು 
  • ಕಾಯಿತುರಿ 2tsp 
  • ಎಣ್ಣೆ ಕರಿಯಲು 
  • ಉಪ್ಪು 
 
ಮಾಡುವ ವಿಧಾನ:
  • ಅಕ್ಕಿಯನ್ನು 2-3ಗಂಟೆ ನೆನೆಸಿ, ನಂತರ ಅಕ್ಕಿಯ ಜೊತೆ ಕೆಮ್ಮುಂಡೆ ಹಣ್ಣಿನ ಬಿಳಿ ಭಾಗ, ಜೀರಿಗೆ, ಕೊತ್ತಂಬರಿ, ಒಣಮೆಣಸು ಮತ್ತು ಕರಿಬೇವು ಹಾಕಿ ರುಬ್ಬಿ.(ನೀರು ಬೇಕಾಗುವದಿಲ್ಲ ಕೆಮ್ಮುಂಡೆ ಹಣ್ಣಿನ ನೀರು ಸಾಕು.)
  • 1ಹುಟ್ಟು ರುಬ್ಬಿದ ಹಿಟ್ಟು ಮತ್ತು ಅದಕ್ಕೆ 1ಕಪ್ ನೀರು ಹಾಕಿ ಕುದಿಸಿ, ಕೈ ಬಿಡದೆ ಕರಡುತ್ತಿರಿ.ಹುಗ್ಗೆ ಆದ ನಂತರ,ತಣಿಯುವ ತನಕ ಕಾಯಿರಿ.
  • ಎಣ್ಣೆ ಬಿಸಿಗಿಡಿ.ರುಬ್ಬಿದ ಹಿಟ್ಟಿಗೆ,ಹುಗ್ಗೆ,ಉಪ್ಪು,ಹಸಿಮೆಣಸು,ಉಳ್ಳಾಗಡ್ಡೆ ಮತ್ತು ಕಾಯಿತುರಿ ಹಾಕಿ ಚೆನ್ನಾಗಿ ಕಲಸಿ.ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣ,ಪಕೋಡ ರೀತಿ ಬಿಡಿ.
  • ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವ ತನಕ ಕರಿಯಿರಿ.
  • ಬಿಸಿ ಇದ್ದಾಗಲೇ ತಿನ್ನಿ.
ಸಲಹೆ:
  • ಕೆಮ್ಮುಂಡೆ ಹಣ್ಣಿನ ಬದಲಾಗಿ ಮೊಗೆಕಾಯಿ,ಸೌತೆಕಾಯಿ ಕೂಡ ಬಳಸಬಹುದು.
  • ಇದರಿಂದ ಸಿಹಿ ಮುಳ್ಕವನ್ನೂ ಮಾಡಬಹುದು.

Friday, 22 June 2012

Marrow squash raita




 To read it in English click here

ಬೇಕಾಗುವ ಸಾಮಗ್ರಿಗಳು :
  • Marrow squash 1/2 chopped
  • ಕಾಯಿತುರಿ ೧ ಕಪ್ 
  • ಮೊಸರು ೧ ಕಪ್ 
  • ಹಸಿಮೆಣಸು ೧ ಸಣ್ಣಗೆ ಹೆಚ್ಚಿದ್ದು 
  • ಈರುಳ್ಳಿ  ೧/೨ ಸಣ್ಣಗೆ ಹೆಚ್ಚಿದ್ದು
  • ಒಣಮೆಣಸು ೧ ಕಟ್ ಮಾಡಿಟ್ಟಿದ್ದು 
  • ಎಣ್ಣೆ  ೧ ಚಮಚ 
  • ಸಾಸಿವೆ ಕಾಳು ೧/೨ ಚಮಚ 
  • ಇಂಗು ಚಿಟಿಕೆ 
  • ಅರಿಶಿನ ಚಿಟಿಕೆ (optional)
  • ಉಪ್ಪು 
  • ಸಕ್ಕರೆ ಚಿಟಿಕೆ
ಮಾಡುವ ವಿಧಾನ :

  • Marrow squash ಬೇಯಿಸಿಟ್ಟುಕೊಳ್ಳಿ.
  • ಕಾಯಿತುರಿಯನ್ನು  ನುಣ್ಣನೆ ರುಬ್ಬಿಟ್ಟುಕೊಳ್ಳಿ.
  • ಬೇಯಿಸಿದ marrow squashಗೆ,ರುಬ್ಬಿದ ಮಿಶ್ರಣ,ಮೊಸರು,ಈರುಳ್ಳಿ,ಹಸಿಮೆಣಸು,ಸಕ್ಕರೆ  ಮತ್ತು ಉಪ್ಪು ಹಾಕಿ,ಚೆನ್ನಾಗಿ ಕರಡಿ.
  • ನಂತರ ಇದಕ್ಕೆ ಎಣ್ಣೆ,ಸಾಸಿವೆ,ಇಂಗು,ಒಣಮೆಣಸು,ಅರಶಿನದ ಒಗ್ಗರಣೆ ಕೊಡಿ. 
  • Marrow squash ಹಶಿ ಸಿದ್ಧ.
 

Tuesday, 19 June 2012

Marrow squash majjige huli


Click here for English
 ಬೇಕಾಗುವ ಸಾಮಗ್ರಿಗಳು:
  •  Marrow squash 1/2  ಕತ್ತರಿಸಿದ್ದು
  • ಕಾಯಿತುರಿ ೧ಕಪ್ 
  • ಮಜ್ಜಿಗೆ ೧-೨ ಕಪ್ 
  • ಜೀರಿಗೆ ೧/೨ ಚಮಚ 
  • ಕೊತ್ತಂಬರಿ ೨ ಚಮಚ 
  • ಮೆಂತ್ಯ ೧/೪ ಚಮಚ 
  • ಸಾಸಿವೆ ಕಾಳು ೧ಚಮಚ 
  • ಇಂಗು 
  • ಅರಶಿನ 
  • ಹಸಿಮೆಣಸು೨-೩
  • ಎಣ್ಣೆ  ೨-೩ ಚಮಚ 
  • ಕರಿಬೇವಿನ ಎಲೆ ಸ್ವಲ್ಪ 
  • ಉಪ್ಪು ರುಚಿಗೆ 
  • ಸಕ್ಕರೆ ರುಚಿಗೆ  
 
ಮಾಡುವ ವಿಧಾನ :

  • ಜೀರಿಗೆ,ಕೊತ್ತಂಬರಿ ,ಸಾಸಿವೆ ,ಮೆಂತೆಯನ್ನು ಸ್ವಲ್ಪ ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.
  • ಕಾಯಿತುರಿ,ಹುರಿದ ಸಾಮಗ್ರಿಗಳು ಮತ್ತು ಹಸಿಮೆಣಸನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
  • ಒಂದು ಪಾತ್ರೆಯಲ್ಲಿ ಎಣ್ಣೆ  ಬಿಸಿಗಿಡಿ.
  • ಎಣ್ಣೆ ಬಿಸಿಬಂದ ತಕ್ಷಣ ಕರಿಬೇವು,ಇಂಗು,ಅರಶಿನ marrow squash ಮತ್ತು ನೀರನ್ನು  ಹಾಕಿ 10 ನಿಮಿಷ ಬೇಯಿಸಿ.
  • ಈಗ ರುಬ್ಬಿದ ಮಿಶ್ರಣ,ಉಪ್ಪು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ.(೫-೧೦ನಿಮಿಷ ).
  • ನಂತರ ಮಜ್ಜಿಗೆಯನ್ನು ಹಾಕಿ ಚೆನ್ನಾಗಿ ಕರಡಿ.(ಮಜ್ಜಿಗೆ ಹಾಕಿ ಬಿಸಿ ಮಾಡಬೇಡಿ)
  • ಬಿಸಿ ಅನ್ನದೊಂದಿಗೆ ಚೆನ್ನಾಗಿರುತ್ತದೆ.

Tuesday, 12 June 2012

Marrow squash payasa





Click here for English


ಬೇಕಾಗುವ ಸಾಮಗ್ರಿಗಳು :
  • ಟೈಗರ್ ಕ್ರಾಸ್ marrow 1/2 ಬೌಲ್ ಸಣ್ಣಗೆ ಹೆಚ್ಚಿದ್ದು 
  • ನೀರು 1ಬೌಲ್ 
  • ಅಕ್ಕಿ ಹಿಟ್ಟು 1ಚಮಚ 
  • ಸಕ್ಕರೆ 5-6ಚಮಚ 
  • ಸ್ವಲ್ಪ ಉಪ್ಪು ಬೇಕಾದರೆ 
  • ಕಾಯಿತುರಿ 2ಕಪ್ 
  • ಏಲಕ್ಕಿ ಪೌಡರ್ 1ಚಮಚ 
  • ಲವಂಗ 2-3
  • ಒಣ ದ್ರಾಕ್ಷಿ 
  • ಗೇರುಬೀಜ 
  • ತುಪ್ಪ 

 

ಮಾಡುವ ವಿಧಾನ :
  • ಒಂದು ಪಾತ್ರೆಗೆ marrow ಮತ್ತು ನೀರನ್ನು ಹಾಕಿ 10 ನಿಮಿಷ ಕುದಿಸಿ.
  • ಸಕ್ಕರೆಯನ್ನು ಹಾಕಿ ಇನ್ನೂ 5 ನಿಮಿಷ ಕುದಿಸಿ ಮತ್ತು ಅಕ್ಕಿ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕರಡಿ ಸೇರಿಸಿ.(ಇಲ್ಲದಿದ್ದರೆ ಪಾಯಸ ಗಂಟು ಬರಬಹುದು)
  • ಕಾಯಿಯನ್ನು ರುಬ್ಬಿ ಕಾಯಿಹಾಲನ್ನು ತೆಗೆದು ಪಾಯಸಕ್ಕೆ ಸೇರಿಸಿ.
  • ಲವಂಗ ಮತ್ತು ಏಲಕ್ಕಿಯನ್ನು ಹಾಕಿ.
  • ಒಣದ್ರಾಕ್ಷಿ ಮತ್ತು ಗೇರುಬೀಜವನ್ನು ತುಪ್ಪದಲ್ಲಿ ಹುರಿದು ಪಾಯಸವನ್ನು ಅಲಂಕರಿಸಿ.
  • ಈ ಪಾಯಸ ದೋಸೆ ಜೊತೆ ಅಥವಾ ಹೀಗೆಯೂ ಚೆನ್ನಾಗಿರುತ್ತದೆ.

Thursday, 9 February 2012

ಬಟಾಟೆ ಅವಲಕ್ಕಿ



Click here for English
ಬೇಕಾಗುವ ಸಾಮಗ್ರಿಗಳು:
  • ಬಟಾಟೆ ೧chopped
  • ಉಳ್ಳಾಗಡ್ಡೆ  ೧ sliced
  • ಹಸಿಮೆಣಸು ೨ sliced 
  • ದಪ್ಪ ಅವಲಕ್ಕಿ ೧ bowl ತೊಳೆದದ್ದು  
  • ಎಣ್ಣೆ 2tsp 
  • ಸಾಸಿವೆ ೧/೨ tsp 
  • ಜೀರಿಗೆ ೧tsp
  • ಕರಿಬೇವು 
  • ಕೊತ್ತಂಬರಿ ಸೊಪ್ಪು 
  • ಇಂಗು 
  • ಅರಶಿನ 
  • ಲಿಂಬುರಸ 
  • ಉಪ್ಪು 
ಮಾಡುವ ವಿಧಾನ :
  • ಒಂದು ತವಾದಲ್ಲಿ ಎಣ್ಣೆ ಹಾಕಿ ಬಿಸಿಗಿಡಿ.
  • ಎಣ್ಣೆ ಬಿಸಿಯಾದನಂತರ,ಸಾಸಿವೆ ಮತ್ತು ಜೀರಿಗೆ ಹಾಕಿ ಸಾಸಿವೆ ಸಿಡಿಯುವ ತನಕ ಕಾದು, ನಂತರ ಹಸಿಮೆಣಸು, ಉಳ್ಳಾಗಡ್ಡೆ, ಬಟಾಟೆ ಮತ್ತು ಸಲ್ಪ ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ.
  • ಈಗ ಕರಿಬೇವು, ಇಂಗು,ಅರಶಿನ ಮತ್ತು  ಕೊತ್ತಂಬರಿ ಸೊಪ್ಪು ಹಾಕಿ 30 seconds ಬಿಟ್ಟು, ಅವಲಕ್ಕಿ,ಉಪ್ಪು ಮತ್ತು ಲಿಂಬುರಸ ಹಾಕಿ ಚೆನ್ನಾಗಿ ಕಲಸಿ.

Monday, 23 January 2012

ಒಂದೆಲಗ ತಂಬ್ಳಿ


ಬೇಕಾಗುವ ಸಾಮಗ್ರಿಗಳು:
  • ಒಂದೆಲಗ ೧/೨ cup ಕತ್ತರಿಸಿದ್ದು (whole plant)
  •  ಕಾಳು ಮೆಣಸು ೫-೬ 
  • ಜೀರಿಗೆ 1tsp 
  • ಕಾಯಿತುರಿ 1cup
  • ಉಪ್ಪು 
  • ಬೆಲ್ಲ 
  • ಮಜ್ಜಿಗೆ 1cup 
  • ಎಣ್ಣೆ 
  • ಒಣಮೆಣಸು 
  • ಸಾಸಿವೆ ಕಾಳು 
ಮಾಡುವ ವಿಧಾನ :
  • ಕಾಳು ಮೆಣಸು ಮತ್ತು ಜೀರಿಗೆಯನ್ನು ಹುರಿದಿಡಿ.
  • ಮಿಕ್ಸಿಗೆ ಕಾಯಿತುರಿ,ಹುರಿದಿಟ್ಟ ಕಾಳು ಮೆಣಸು ಮತ್ತು ಜೀರಿಗೆ ಹಾಕಿ ನುಣ್ಣಗೆ ರುಬ್ಬಿ.
  • ಒಂದೆಲಗವನ್ನು ಬೇರೆಯಾಗಿಯೇ ರುಬ್ಬಿ ಸೋಸಿ.
  • ಒಂದು ಪಾತ್ರೆ ತೆಗೆದುಕೊಂಡು ರುಬ್ಬಿದ ಕಾಯಿತುರಿ ಮಿಶ್ರಣ,ಸೋಸಿದ ಒಂದೆಲಗದ ರಸ,ಮಜ್ಜಿಗೆ,ಉಪ್ಪು,ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಕರಡಿ 
  • ಎಣ್ಣೆ, ಸಾಸಿವೆ  ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ.