Friday, 30 September 2011

ಒಂದೆಲಗದ ಚಟ್ನಿ


By guest Blogger Prabha Hebbar

ಬೇಕಾಗುವ ಸಾಮಗ್ರಿಗಳು
  • 1 ಕಪ್ ಹೆಚ್ಚಿದ ಒಂದೆಲಗ (Centella asiatica)
  • 1 ಕಪ್ ತೆಂಗಿನ ತುರಿ
  • 1 ಟೀ ಚಮಚ ಜೀರಿಗೆ
  • 1/2 ಟೀಚ ಕೊತ್ಹೊಂಬರಿ ಬೀಜ
  • 1 ಟೀಚ ಹುಣಸೆ ಹಣ್ಣಿನ ರಸ
  • ಚಿಟಿಕೆ ಇಂಗು
  • 3-4 ಒಣಮೆಣಸು
  • 1 ಟೀಚ ಎಣ್ಣೆ
  • ರುಚಿಗೆ ಉಪ್ಪು
ಒಗ್ಗರಣೆಗೆ:
  • 1 ಟೀ ಚಮಚ ಎಣ್ಣೆ
  • 1/2 ಸಾಸಿವೆ
  • 1 ಒಣಮೆಣಸಿನ ತುಂಡು
ವಿಧಾನ :
  • ಒಂದು ಬಾಣೆಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕೊತ್ಹೊಂಬರಿ ಬೀಜ , ಜೀರಿಗೆ, ಒಣಮೆಣಸು ಮತ್ತು ಹೆಚ್ಚಿದ ಒಂದೆಲಗ ಹಾಕಿ 5 ನಿಮಿಷ ಬಾಡಿಸಿ.
  • ನಂತರ ಬಾಡಿಸಿದ ಒಂದೆಲಗವನ್ನು ತೆಂಗಿನ ತುರಿ, ಇಂಗು, ಹುಣಸೆ ರಸ, ಮತ್ತು ಉಪ್ಪಿನೊಂದಿಗೆ ಸ್ವಲ್ಪ ನೀರು ಹಾಕಿ ರುಬ್ಬಿ.
  • ನಂತರ ಸಾಸಿವೆ, ಒಣಮೆಣಸು ಹಾಕಿ ಒಗ್ಗರಣೆ ಹಾಕಿ. ಒಂದೆಲಗದ ಚಟ್ನಿ ಸಿದ್ದ.
  • ಅನ್ನ, ಉಪ್ಪಿನಕಾಯಿ ಮತ್ತೆ ಈರುಳ್ಳಿಯೊಂದಿಗೆ ಬಡಿಸಿ.

Monday, 26 September 2011

ಮೊಡಂಗಲ ಕಾಯಿ ಪಲ್ಯ


ಬೇಕಾಗುವ ಸಮಯ :೧೫ ನಿಮಿಷ 
2 ಜನರಿಗೆ ಸಾಕಾಗುತ್ತದೆ.
ಬೇಕಾಗುವ ಸಾಮಗ್ರಿಗಳು:            
  • ಮೊಡಂಗಲ ಕಾಯಿ ೪ ಸಣ್ಣಗೆ ಹೆಚ್ಚಿದ್ದು 
  • ಹಸಿಮೆಣಸು ೧ ಸಣ್ಣಗೆ ಹೆಚ್ಚಿದ್ದು 
  • ಉಳ್ಳಾಗಡ್ಡೆ  ೧ ಹೆಚ್ಚಿದ್ದು 
  • ಕಾಯಿತುರಿ ಸ್ವಲ್ಪ 
  • ಎಣ್ಣೆ ೩ ಚಮಚ
  • ಸಾಸಿವೆ ಕಾಳು
  • ಜೀರಿಗೆ ೧ ಚಮಚ 
  • ಇಂಗು ಚಿಟಿಕೆ 
  • ಅರಿಶಿನ ಚಿಟಿಕೆ 
  • ಉಪ್ಪು 
  • ಸಕ್ಕರೆ ಚಿಟಿಕೆ 
  • ಹುಳಿಪುಡಿ ಚಿಟಿಕೆ
ಮಾಡುವ ವಿಧಾನ :
  • ಒಂದು ಪಾತ್ರೆಗೆ ಎಣ್ಣೆ ಹಾಕಿ,ಬಿಸಿ ಬಂದ ನಂತರ ಅದಕ್ಕೆ ಸಾಸಿವೆ ಕಾಳು (ಸಿಡಿಯುವ ತನಕ ಕಾಯಿರಿ),ಜೀರಿಗೆ, ಮೆಣಸು,ಇಂಗು,ಅರಶಿನ ಮತ್ತು ಈರುಳ್ಳಿ ಹಾಕಿ ಒಂದು ನಿಮಿಷ ಬಿಟ್ಟು,ಹೆಚ್ಚಿದ ಮೊಡಂಗಲಕಾಯಿ  ಹಾಕಿ ಚೆನ್ನಾಗಿ ಹುರಿಯಿರಿ.
  • ಅದಕ್ಕೆ ಕಾಯಿತುರಿ ಸೇರಿಸಿ ಇನ್ನೊಂದು  ನಿಮಿಷ ಹುರಿಯಿರಿ.
  • ಇದು ಅನ್ನದ ಜೊತೆ ಚೆನ್ನಾಗಿರುತ್ತದೆ.

Saturday, 17 September 2011

ಮೊಡಂಗಲಕಾಯಿ ಬಜ್ಜಿ


ಬೇಕಾಗುವ ಸಮಯ:10ನಿಮಿಷ.
2-4 ಜನರಿಗೆ ಸಾಕಾಗುತ್ತದೆ.
ಬೇಕಾಗುವ ಸಾಮಗ್ರಿಗಳು:

  • ಮೊಡಂಗಲಕಾಯಿ 2 ಸಣ್ಣಗೆ ಹೆಚ್ಚಿದ್ದು
  • ಮೊಸರು ಅಥವಾ ಮಜ್ಜಿಗೆ 1-2ಕಪ್
  • ಎಣ್ಣೆ 2ಚಮಚ
  • ಹಸಿಮೆಣಸು 1 ಕತ್ತರಿಸಿದ್ದು
  • ಸಾಸಿವೆ ಕಾಳು 1/2ಚಮಚ
  • ಅರಶಿನ ಚಿಟಿಕೆ
  • ಇಂಗು ಚಿಟಿಕೆ
  • ಉಪ್ಪು
  • ಸಕ್ಕರೆ ಚಿಟಿಕೆ

ಮಾಡುವ ವಿಧಾನ:
  • ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಗಿಡಿ.
  • ಎಣ್ಣೆ ಕಾದ ನಂತರ,ಸಾಸಿವೆ ಕಾಳು ಹಾಕಿ(ಸಿಡಿಯುವ ತನಕ ತಡೆದು),ನಂತರ ಹಸಿಮೆಣಸು,ಅರಶಿನ,ಇಂಗು ಹಾಕಿ ಒಂದು ನಿಮಿಷ ಬಿಟ್ಟು,ಮೊಡಂಗಲ ಕಾಯಿ ಹಾಕಿ ಚೆನ್ನಾಗಿ ಹುರಿಯಿರಿ.
  • ನಂತರ ಮೊಸರು,ಉಪ್ಪು ಮತ್ತು ಸಕ್ಕರೆ ಹಾಕಿದರೆ,ಮೊಡಂಗಲಕಾಯಿ ಬಜ್ಜಿ ಸವಿಯಲು ಸಿದ್ಧ.

Monday, 12 September 2011

ಕೋಡುಬಳೆ(Crunchy Rings)


Click here for English

ತಯಾರಿಸಲು ಬೇಕಾಗುವ ಸಮಯ:15-20ನಿಮಿಷ
ಬೇಕಾಗುವ ಸಾಮಗ್ರಿಗಳು:

  • ಅಕ್ಕಿಹಿಟ್ಟು 1ಕಪ್
  • ಮೈದಾಹಿಟ್ಟು 1/2ಕಪ್
  • ರವೆ 1/2ಕಪ್
  • ಉಪ್ಪು
  • ಅರಿಶಿನ ಚಿಟಿಕೆ
  • ಖಾರದ ಪುಡಿ ೧ಚಮಚ
  • ಜೀರಿಗೆ 1/2 ಚಮಚ
  • ಎಳ್ಳು 1/2ಚಮಚ ಹುರಿದದ್ದು
  • ಒಮಕಾಳು ಚಿಟಿಕೆ
  • ಎಣ್ಣೆ ಕರಿಯಲು


ಮಾಡುವ ವಿಧಾನ:
    • ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು(ಎಣ್ಣೆ ಒಂದನ್ನು ಬಿಟ್ಟು) ಬಿಸಿನೀರನ್ನು,2ಚಮಚ ಬಿಸಿ ಎಣ್ಣೆ ಬಳಸಿ ಚಕ್ಕಲಿ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ.
    • ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿಗಿಡಿ.
    • ಒಂದು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸಣ್ಣ ಬಳೆ ಆಕಾರ ಕೊಟ್ಟು,ಎಣ್ಣೆ ಬಿಸಿ ಬಂದ ನಂತರ ಅದನ್ನು ಕರಿಯಿರಿ.
    • ಕೋಡುಬಳೆ ಸವಿಯಲು ಸಿದ್ಧ.



    ಅಕ್ಕಿ ವಡೆ(Rice Vada)


    Click here for English.
    ತಯಾರಿಸಲು ಬೇಕಾಗುವ ಸಮಯ:20ನಿಮಿಷ
    ಬೇಕಾಗುವ ಸಾಮಗ್ರಿಗಳು:

    • ಅಕ್ಕಿಹಿಟ್ಟು 1ಕಪ್
    • ಸೌತೆಕಾಯಿ 1/4 ಕಪ್ ತುರಿದದ್ದು
    • ಉಪ್ಪು
    • ಜೀರಿಗೆ
    • ಅರಶಿನ ಚಿಟಿಕೆ
    • ಎಣ್ಣೆ ಕರಿಯಲು
    ಮಾಡುವ ವಿಧಾನ:
    • ಅಕ್ಕಿಹಿಟ್ಟು,ಸೌತೆಕಾಯಿ,ಜೀರಿಗೆ,ಉಪ್ಪು,ಅರಿಶಿನವನ್ನು ಸ್ವಲ್ಪ ಬಿಸಿನೀರು ಬಳಸಿ ಕಲಸಿಟ್ಟುಕೊಳ್ಳಿ.
    • ಎಣ್ಣೆಯನ್ನು ಸಣ್ಣ ಬೆಂಕಿಯಲ್ಲಿ ಬಿಸಿಗಿಡಿ.
    • ಒಂದು ಲಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ವಡೆ ಆಕಾರ ಕೊಟ್ಟು,ಎಣ್ಣೆ ಬಿಸಿ ಬಂದ ನಂತರ ಕರಿಯಿರಿ.
    • ಅಕ್ಕಿ ವಡೆ ಪಾಯಸದ ಜೊತೆ ಚೆನ್ನಾಗಿರುತ್ತದೆ.

    ಹಲಸಿನ ಹಣ್ಣಿನ ದೋಸೆ(Jackfruit Crepes)

    Click here for English

    ಬೇಕಾಗುವ ಸಾಮಗ್ರಿಗಳು:
    • ಅಕ್ಕಿ 1ಕಪ್
    • ಹಲಸಿನ ಹಣ್ಣಿನ ಸೊಳೆ 2ಕಪ್
    • ಉಪ್ಪು
    • ಬೆಲ್ಲ
    ಮಾಡುವ ವಿಧಾನ:
    • ಅಕ್ಕಿಯನ್ನು 4-5 ಘಂಟೆಕಾಲ ನೆನೆಸಿ.
    • ಅಕ್ಕಿ ತೊಳೆದು,ರುಬ್ಬಿ.ನಂತರ ಹಲಸಿನ ಸೊಳೆಯನ್ನು ರುಬ್ಬಿ.
    • ರುಬ್ಬಿದ ಎಲ್ಲ ಹಿಟ್ಟು,ಬೆಲ್ಲ,ಉಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಕಲಸಿ.
    • ಕಾವಲಿ ಬಿಸಿಬಂದ ನಂತರ,ತೆಳ್ಳಗಿನ ದೊಸೆ ಎರೆಯಿರಿ.
    • ಬೆಂದ ನಂತರ ತೆಗೆದು ಸವಿದು ನೋಡಿ ರುಚಿ.

    ಮೆಂತೆಕಾಳು ಪಾನೀಯ


    ಬಾಯಿ ಹುಣ್ಣು ಆದೊಡನೆ ಮೊದಲು ನೆನಪಿಗೆ ಬರುವ ಮನೆಔಷಧಿ ಇದು.
    ಬೇಕಾಗುವ ಸಾಮಗ್ರಿಗಳು:

    • ಮೆಂತೆಕಾಳು 5 ಚಮಚ
    • ಕಾಯಿತುರಿ 2-4ಚಮಚ
    • ಬೆಲ್ಲ
    ಮಾಡುವ ವಿಧಾನ:
    • ಮೆಂತೆಕಾಳನ್ನು 8 ಘಂಟೆಗಳ ಕಾಲ ಹಾಗೇ ನೆನೆಸಿಡಿ.
    • ನಂತರ ಮೆಂತಕಾಳು,ಕಾಯಿತುರಿ ಹಾಕಿ ರುಬ್ಬಿ.
    • ಬೆಲ್ಲ ಮತ್ತು ನೀರನ್ನು ಹಾಕಿ ಚೆನ್ನಾಗಿ ಕರಡಿ.
    • ಇದನ್ನು 2-3 ಘಂಟೆಯೊಳಗೆ ಖಾಲಿಮಾಡಿ.ನಂತರ ಚೆನ್ನಾಗಿರುವದಿಲ್ಲ.

    ಮಾವಿನ ಕಾಯಿ ಬೂತಗೊಜ್ಜು

    ಬೇಕಾಗುವ ಸಾಮಗ್ರಿಗಳು:
    • ಬೇಯಿಸಿದ ಮಾವಿನ ಕಾಯಿ 4
    • ಸಣ್ಣ ಮೆಣಸು 10/ಹಸಿಮೆಣಸು 4
    • ಕಾಯಿತುರಿ 1 ಕಪ್
    • ಬೆಲ್ಲ
    • ಎಣ್ಣೆ 1ಚಮಚ
    • ಸಾಸಿವೆ ಕಾಳು 1/2 ಚಮಚ
    • ಇಂಗು
    • ಅರಿಶಿನ ಚಿಟಿಕೆ
    • ಬೆಳ್ಳುಳ್ಳಿ 4 ಎಸಳು
    • ಒಣಮೆಣಸು
    ಮಾಡುವ ವಿಧಾನ:
    • ಬೇಯಿಸಿದ ಮಾವಿನ ಕಾಯಿಯನ್ನು ಗಿವುಚಿಟ್ಟುಕೊಳ್ಳಿ.
    • ನಂತರ ಅದಕ್ಕೆ ಜಜ್ಜಿದ ಸಣ್ಣ ಮೆಣಸು,ಕಾಯಿತುರಿ,ಬೆಲ್ಲ ಹಾಕಿ.
    • ಎಣ್ಣೆ,ಒಣಮೆಣಸು,ಸಾಸಿವೆ,ಇಂಗು,ಅರಶಿನ,ಬೆಳ್ಳುಳ್ಳಿ ಒಗ್ಗರಣ್ಣೆ ಕೊಡಿ.
    • ಚೆನ್ನಾಗಿ ಕಲಸಿ.
    ಕಿವಿಮಾತು:
    • ಮೊದಲೇ ಬೇಯಿಸಿದ ಮಾವಿನ ಕಾಯಿ ಬಳಸುತ್ತಿದ್ದರೆ,ಅದನ್ನು ಉಪ್ಪು ಹಾಕಿಯೇ ಸಂಗ್ರಹಿಸಿರುತ್ತಾರೆ.
    • ಇಲ್ಲದಿದ್ದರೆ ಉಪ್ಪನ್ನು ಬಳಸಿ.

    ವಾಂಗಿ ಬಾತ್



     Click here for English

    ತಯಾರಿಸಲು ಬೇಕಾಗುವ ಸಮಯ: 45 ನಿಮಿಷ
    4 ಜನರಿಗೆ ಸಾಕಾಗುತ್ತದೆ.
    ಬೇಕಾಗುವ ಸಾಮಗ್ರಿಗಳು:

    • ಬದನೆಕಾಯಿ 1 ಕತ್ತರಿಸಿದ್ದು
    • ಬಾಸ್ಮತಿ ಅಕ್ಕಿ 2 ಕಪ್
    • ಕಾಯಿತುರಿ 1/4 ಕಪ್
    • ಎಣ್ಣೆ
    • ಸಾಸಿವೆ ಕಾಳು 1/2 ಚಮಚ
    • ಮೆಂತೆಕಾಳು 1/4 ಚಮಚ
    • ಜೀರಿಗೆ 2 ಚಮಚ
    • ಉದ್ದಿನ ಬೇಳೆ 4 ಚಮಚ
    • ಕಡ್ಲೆ ಬೇಳೆ(ಬೇಕಾದರೆ) 4 ಚಮಚ
    • ಒಣಮೆಣಸು 8
    • ಇಂಗು ಚಿಟಿಕೆ
    • ಲವಂಗ 5-6
    • ಕುತುಂಬರಿ 2 ಚಮಚ
    • ಅರಿಶಿನ ಚಿಟಿಕೆ
    ಮಾಡುವ ವಿಧಾನ:
    • ಅಕ್ಕಿಯನ್ನು 1/2 ಘಂಟೆ ಮೊದಲು ತೊಳೆದು ನೆನೆಸಿಡಿ.
    • ಒಣಮೆಣಸು,ಉದ್ದಿನ ಬೇಳೆ,ಜೀರಿಗೆ,ಮೆಂತೆ,ಲವಂಗ,ಕುತುಂಬರಿಯನ್ನು ಸ್ವಲ್ಪ ಎಣ್ಣೆ ಬಳಸಿ ಹುರಿದಿಟ್ಟುಕೊಳ್ಳಿ.
    • ಕಾಯಿತುರಿ ಮತ್ತು ಹುರಿದಿಟ್ಟ ಸಾಮಗ್ರಿಯನ್ನು ರುಬ್ಬಿಟ್ಟುಕೊಳ್ಳಿ.
    • ಕುಕ್ಕರ್ನಲ್ಲಿ 4 ಚಮಚ ಎಣ್ಣೆ ಬಿಸಿಗಿಡಿ.
    • ಎಣ್ಣೆ ಬಿಸಿ ಆದ ನಂತರ ಸಾಸಿವೆ ಕಾಳು, ಅರಿಶಿನ, ಇಂಗು, ಬದನೆಕಾಯಿ ಹಾಕಿ ಒಂದು ನಿಮಿಷ ಬಿಟ್ಟು ನೆನೆಸಿಟ್ಟ ಅಕ್ಕಿಯನ್ನು ಹಾಕಿ ಒಂದು ನಿಮಿಷ ಹುರಿಯಿರಿ
    • ಈಗ ಕುಕ್ಕರ್ಗೆ ರುಬ್ಬಿಟ್ಟುಕೊಂಡ ಮಿಶ್ರಣ ಮತ್ತು 3ಕಪ್ ನೀರು ಹಾಕಿ.
    • ಉಪ್ಪನ್ನು ಹಾಕಿ, ಕುಕ್ಕರ್ ಮುಚ್ಚಿಡಿ.
    • 2 ಸೀಟಿ ಹೊಡೆಸಿ,15 ನಿಮಿಷ ಕುಕರ್ ಹಾಗೆ ಬಿಟ್ಟರೆ ವಾಂಗಿ ಬಾತ್ ಸಿದ್ಧ.

    ವಾತಂಗಿ ಸೊಪ್ಪಿನ ತಂಬ್ಳಿ


    ತಯಾರಿಸಲು ಬೇಕಾಗುವ ಸಮಯ: 10-15 ನಿಮಿಷ

    ಬೇಕಾಗುವ ಸಾಮಗ್ರಿಗಳು:


    • ವಾತಂಗಿ ಸೊಪ್ಪು 1ಕಪ್
    • ಕಾಯಿತುರಿ 1ಕಪ್
    • ಹಸಿ ಮೆಣಸು 1
    • ಉಪ್ಪು 3/4 ಚಮಚ
    • ಮಜ್ಜಿಗೆ 1ಕಪ್
    • ಎಣ್ಣೆ 1ಚಮಚ
    • ಒಣಮೆಣಸು 1
    • ಸಾಸಿವೆಕಾಳು 1/2ಚಮಚ
    ಮಾಡುವ ವಿಧಾನ:
    • ಹಸಿ ಮೆಣಸು,ವಾತಂಗಿ ಸೊಪ್ಪಿಗೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಹೊರೆದಿಟ್ಟುಕೊಳ್ಳಿ.
    • ಒಣಮೆಣಸು ಕತ್ತರಿಸಿಟ್ಟುಕೊಳ್ಳಿ.
    • ಕಾಯಿತುರಿ,ವಾತಂಗಿ ಸೊಪ್ಪು ಬೀಸಿಟ್ಟುಕೊಳ್ಳಿ.
    • ಬೀಸಿಟ್ಕಂಡ ಮಿಶ್ರಣಕ್ಕೆ,ಮಜ್ಜಿಗೆ,ಉಪ್ಪು,ನೀರು (ಬೇಕಾದರೆ)ಹಾಕಿ ಕರಡಿಟ್ಕಳಿ.
    • ಎಣ್ಣೆ,ಸಾಸಿವೆ,ಒಣಮೆಣಸಿನ ಒಗ್ಗರಣ್ಣೆ ಕೊಡಿ.
    • ವಾತಂಗಿ ಸೊಪ್ಪಿನ ತಂಬ್ಳಿ ಸವಿಯಲು ಸಿದ್ಧ.

    Sunday, 11 September 2011

    ಶುಂಠಿ ತಂಬ್ಳಿ(Ginger in Butter Milk)


    ತಯಾರಿಸಲು ಬೇಕಾಗುವ ಸಮಯ: 10 ನಿಮಿಷ
    4 ಜನರಿಗೆ ಒದಗುತ್ತದೆ.
    ಬೇಕಾಗುವ ಸಾಮಗ್ರಿಗಳು:

    • ಶುಂಠಿ ಒಂದಿಂಚು
    • ಕಾಯಿ ತುರಿ 1ಕಪ್
    • ಹುಳಿಮಜ್ಜಿಗೆ 1ಕಪ್
    • ಉಪ್ಪು
    • ಎಣ್ಣೆ
    • ಒಣಮೆಣಸು 1
    • ಇಂಗು ಚಿಟಿಕೆ
    • ಸಾಸಿವೆ ಕಾಳು 1/2ಚಮಚ
    • ಅರಿಶಿನ ಚಿಟಿಕೆ
    ಮಾಡುವ ವಿಧಾನ:
    • ಶುಂಠಿ,ಕಾಯಿತುರಿಯನ್ನು ಸ್ವಲ್ಪ ನೀರಿನಿಂದ ರುಬ್ಬಿಟ್ಟುಕೊಳ್ಳಿ.
    • ರುಬ್ಬಿದ ಮಿಶ್ರಣಕ್ಕೆ ಉಪ್ಪು,ಮಜ್ಜಿಗೆ ಹಾಕಿ ಕರಡಿ.
    • ಎಣ್ಣೆ,ಸಾಸಿವೆ,ಒಣಮೆಣಸು,ಇಂಗು,ಅರಿಶಿನದ ಒಗ್ಗರಣ್ಣೆ ಕೊಡಿ.
    • ಬಿಸಿ ಅನ್ನದೊಂದಿಗೆ ಸವಿಯಲು ಕೊಡಿ.

    ನುಗ್ಗೆ ಸೊಪ್ಪಿನ ಚಟ್ನಿ


    ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
    ಬೇಕಾಗುವ ಸಾಮಗ್ರಿಗಳು:
    • ನುಗ್ಗೆ ಸೊಪ್ಪು 1ಕಪ್
    • ಕಾಯಿತುರಿ 1ಕಪ್
    • ಹಸಿಮೆಣಸು 5-6 ಅಥವಾ ಸಣ್ಣಮೆಣಸು(ಚಿಟ್ಟಮೆಣಸು) 10-15
    • ಬೋಳಕಾಳು 4
    • ಉಪ್ಪು
    • ಹುಣಸೆ ಹಣ್ಣು ಸಣ್ಣ ನಿಂಬೆ ಗಾತ್ರದ್ದು.
    • ಎಣ್ಣೆ
    • ಸಾಸಿವೆ ಕಾಳು
    • ಉದ್ದಿನ ಬೇಳೆ
    • ಕಡ್ಲೆ ಬೇಳೆ
    • ಅರಶಿನ
    • ಒಣಮೆಣಸು 1
    • ಇಂಗು
    • ಕರಿಬೇವು 
    ಮಾಡುವ ವಿಧಾನ:
    • ಬೋಳಕಾಳನ್ನು 3ನಿಮಿಷ ಸ್ವಲ್ಪ ಎಣ್ಣೆಯೊಂದಿಗೆ ಸಣ್ಣ ಬೆಂಕಿಯಲ್ಲಿ ಹುರಿದಿಟ್ಟುಕೊಳ್ಳಿ.
    • ನುಗ್ಗೆ ಸೊಪ್ಪನ್ನು 5 ನಿಮಿಷ ಬೇಯಿಸಿಟ್ಟುಕೊಳ್ಳಿ.
    • ಈಗ,ಬೇಯಿಸಿದ ನುಗ್ಗೆ ಸೊಪ್ಪು, ಹಸಿಮೆಣಸು, ಬೋಳಕಾಳು, ಕಾಯಿತುರಿ, ಹುಣಸೆ ಹಣ್ಣು, ಉಪ್ಪು ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ.
    • ರುಬ್ಬಿಟ್ಟ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಅರಶಿನ,ಒಣಮೆಣಸು,ಕರಿಬೇವು,ಇಂಗಿನ ಒಗ್ಗರಣ್ಣೆ ಕೊಡಿ.
    • ಈ ಚಟ್ನಿ ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

    ನುಗ್ಗೆ ಸೊಪ್ಪಿನ ತಂಬ್ಳಿ


    ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
    ಬೇಕಾಗುವ ಸಾಮಗ್ರಿಗಳು:
    • ನುಗ್ಗೆ ಸೊಪ್ಪು 1 ಕಪ್
    • ಕಾಯಿತುರಿ 1ಕಪ್
    • ಹಸಿಮೆಣಸು 1
    • ಬೋಳ ಕಾಳು(ಮೆಣಸಿನ ಕಾಳು) 4
    • ಜೀರಿಗೆ 1ಚಮಚ
    • ಉಪ್ಪು
    • ಮೊಸರು ಅಥವಾ ಮಜ್ಜಿಗೆ 1ಕಪ್
    • ಎಣ್ಣೆ
    • ಸಾಸಿವೆ ಕಾಳು
    • ಅರಶಿನ
    • ಒಣಮೆಣಸು 1
    • ಇಂಗು
    ಮಾಡುವ ವಿಧಾನ:
    • ಒಂದು ಪಾತ್ರೆಗೆ 2ಚಮಚ ಎಣ್ಣೆ ಹಾಕಿ ನುಗ್ಗೆ ಸೊಪ್ಪು, ಹಸಿಮೆಣಸು, ಜೀರಿಗೆ, ಬೋಳಕಾಳನ್ನು ಹೊರಿದು ಇಟ್ಟುಕೊಳ್ಳಿ.
    • ಜೀರಿಗೆ ಮತ್ತು ಮೆಣಸಿನ ಕಾಳನ್ನು ಹೊರಿದಿಟ್ಟುಕೊಳ್ಳಿ.
    • ಕಾಯಿತುರಿ, ನುಗ್ಗೆ ಸೊಪ್ಪು, ಹಸಿಮೆಣಸು, ಜೀರಿಗೆ, ಮೆಣಸಿನ ಕಾಳನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ.
    • ರುಬ್ಬಿದ ಮಿಶ್ರಣಕ್ಕೆ ಮೊಸರು ಮತ್ತು ಉಪ್ಪು ಹಾಕಿ.
    • ರುಬ್ಬಿದ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಒಣಮೆಣಸು, ಅರಿಶಿನ, ಇಂಗಿನ ಒಗ್ಗರಣ್ಣೆ ಕೊಡಿ.
    • ನುಗ್ಗೆ ಸೊಪ್ಪಿನ ತಂಬ್ಳಿ ಅನ್ನದೊಂದಿಗೆ ಸವಿಯಲು ತುಂಬಾ ರುಚಿ.

    ಕನ್ನೆಕೊಡಿ ಚಟ್ನಿ



    ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
    ಬೇಕಾಗುವ ಸಾಮಗ್ರಿಗಳು:
    • ಕನ್ನೆಕೊಡಿ 10-15
    • ಕಾಯಿತುರಿ 1ಕಪ್
    • ಹಸಿಮೆಣಸು 5-6 ಅಥವಾ ಸಣ್ಣಮೆಣಸು(ಚಿಟ್ಟಮೆಣಸು) 10-15
    • ಬೋಳಕಾಳು 4
    • ಉಪ್ಪು
    • ಹುಣಸೆ ಹಣ್ಣು ಸಣ್ಣ ನಿಂಬೆ ಗಾತ್ರದ್ದು.
    • ಎಣ್ಣೆ
    • ಸಾಸಿವೆ ಕಾಳು
    • ಉದ್ದಿನ ಬೇಳೆ
    • ಕಡ್ಲೆ ಬೇಳೆ
    • ಅರಶಿನ
    • ಒಣಮೆಣಸು 1
    • ಇಂಗು
    • ಕರಿಬೇವು 
    ಮಾಡುವ ವಿಧಾನ:
    • ಕನ್ನೆಕೊಡಿ ಮತ್ತು ಹಸಿಮೆಣಸು, ಬೋಳಕಾಳನ್ನು 5ನಿಮಿಷ ಸ್ವಲ್ಪ ಎಣ್ಣೆಯೊಂದಿಗೆ ಸಣ್ಣ ಬೆಂಕಿಯಲ್ಲಿ ಹುರಿದಿಟ್ಟುಕೊಳ್ಳಿ.
    • ಈಗ,ಹುರಿದ ಕನ್ನೆಕೊಡಿ, ಹಸಿಮೆಣಸು, ಬೋಳಕಾಳು, ಕಾಯಿತುರಿ, ಹುಣಸೆ ಹಣ್ಣು, ಉಪ್ಪು ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ.
    • ರುಬ್ಬಿಟ್ಟ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಅರಶಿನ,ಒಣಮೆಣಸು,ಕರಿಬೇವು,ಇಂಗಿನ ಒಗ್ಗರಣ್ಣೆ ಕೊಡಿ.
    • ಈ ಚಟ್ನಿ ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.
     

    ತಗಟೆ ಸೊಪ್ಪಿನ ತಂಬ್ಳಿ


    ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
    ಬೇಕಾಗುವ ಸಾಮಗ್ರಿಗಳು:
    • ತಗಟೆ ಸೊಪ್ಪು 1 ಕಪ್
    • ಕಾಯಿತುರಿ 1ಕಪ್
    • ಬೋಳ ಕಾಳು(ಮೆಣಸಿನ ಕಾಳು) 4
    • ಜೀರಿಗೆ 1ಚಮಚ
    • ಉಪ್ಪು
    • ಮೊಸರು ಅಥವಾ ಮಜ್ಜಿಗೆ 1ಕಪ್
    • ಎಣ್ಣೆ
    • ಸಾಸಿವೆ ಕಾಳು
    • ಅರಶಿನ
    • ಒಣಮೆಣಸು 1
    • ಇಂಗು
    ಮಾಡುವ ವಿಧಾನ:
    • ಒಂದು ಪಾತ್ರೆಗೆ 2ಚಮಚ ಎಣ್ಣೆ ಹಾಕಿ ತಗಟೆ ಸೊಪ್ಪನ್ನು ಹೊರಿದು ಇಟ್ಟುಕೊಳ್ಳಿ.
    • ಜೀರಿಗೆ ಮತ್ತು ಮೆಣಸಿನ ಕಾಳನ್ನು ಹೊರಿದಿಟ್ಟುಕೊಳ್ಳಿ.
    • ಕಾಯಿತುರಿ, ತಗಟೆ ಸೊಪ್ಪು, ಜೀರಿಗೆ,ಮೆಣಸಿನ ಕಾಳನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ.
    • ರುಬ್ಬಿದ ಮಿಶ್ರಣಕ್ಕೆ ಮೊಸರು ಮತ್ತು ಉಪ್ಪು ಹಾಕಿ.
    • ರುಬ್ಬಿದ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಒಣಮೆಣಸು, ಅರಿಶಿನ, ಇಂಗಿನ ಒಗ್ಗರಣ್ಣೆ ಕೊಡಿ.
    • ತಗಟೆ ಸೊಪ್ಪಿನ ತಂಬ್ಳಿ ಅನ್ನದೊಂದಿಗೆ ಸವಿಯಲು ತುಂಬಾ ರುಚಿ.

    ತಗಟೆ ಸೊಪ್ಪಿನ ಚಟ್ನಿ


    ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
    ಬೇಕಾಗುವ ಸಾಮಗ್ರಿಗಳು:
    • ತಗಟೆ ಸೊಪ್ಪು 1/2-1 ಕಪ್
    • ಕಾಯಿತುರಿ 1ಕಪ್
    • ಹಸಿಮೆಣಸು 5-6 ಅಥವಾ ಸಣ್ಣಮೆಣಸು(ಚಿಟ್ಟಮೆಣಸು) 10-15
    • ಬೋಳಕಾಳು 4/ಮೆಣಸಿನ ಕಾಳು
    • ಉಪ್ಪು
    • ಹುಣಸೆ ಹಣ್ಣು ಸಣ್ಣ ನಿಂಬೆ ಗಾತ್ರದ್ದು.
    • ಎಣ್ಣೆ
    • ಸಾಸಿವೆ ಕಾಳು
    • ಉದ್ದಿನ ಬೇಳೆ
    • ಕಡ್ಲೆ ಬೇಳೆ
    • ಅರಶಿನ
    • ಒಣಮೆಣಸು 1
    • ಇಂಗು
    ಮಾಡುವ ವಿಧಾನ:
    • ತಗಟೆ ಸೊಪ್ಪು ಮತ್ತು ಹಸಿಮೆಣಸು,ಬೋಳಕಾಳನ್ನು 5ನಿಮಿಷ ಸ್ವಲ್ಪ ಎಣ್ಣೆಯೊಂದಿಗೆ ಸಣ್ಣ ಬೆಂಕಿಯಲ್ಲಿ ಹೊರಿದಿಟ್ಟುಕೊಳ್ಳಿ.
    • ಈಗ,ಹುರಿದ ತಗಟೆ ಸೊಪ್ಪು, ಹಸಿಮೆಣಸು, ಬೋಳಕಾಳು, ಕಾಯಿತುರಿ, ಹುಣಸೆ ಹಣ್ಣು, ಉಪ್ಪು ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ.
    • ರುಬ್ಬಿಟ್ಟ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಅರಶಿನ,ಒಣಮೆಣಸು,ಇಂಗಿನ ಒಗ್ಗರಣ್ಣೆ ಕೊಡಿ.
    • ಈ ಚಟ್ನಿ ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

    ಸಂಬಾರ ಸೊಪ್ಪಿನ ಚಟ್ನಿ


    ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
    ಬೇಕಾಗುವ ಸಾಮಗ್ರಿಗಳು:
    • ಸಂಬಾರ ಸೊಪ್ಪು 10-15
    • ಕಾಯಿತುರಿ 1ಕಪ್
    • ಹಸಿಮೆಣಸು 5-6 ಅಥವಾ ಸಣ್ಣಮೆಣಸು(ಚಿಟ್ಟಮೆಣಸು) 10-15
    • ಉಪ್ಪು
    • ಮೊಸರು ಅಥವಾ ಹುಳಿಮಜ್ಜಿಗೆ 1/4ಕಪ್
    • ಎಣ್ಣೆ
    • ಸಾಸಿವೆ ಕಾಳು
    • ಉದ್ದಿನ ಬೇಳೆ
    • ಕಡ್ಲೆ ಬೇಳೆ
    • ಅರಶಿನ
    • ಒಣಮೆಣಸು 1
    • ಇಂಗು
    • ಕರಿಬೇವು 
    ಮಾಡುವ ವಿಧಾನ:
    • ಸಂಬಾರ ಸೊಪ್ಪು ಮತ್ತು ಹಸಿಮೆಣಸನ್ನು 5ನಿಮಿಷ ಸ್ವಲ್ಪ ನೀರಿನೊಂದಿಗೆ ಬೇಯಿಸಿಟ್ಟುಕೊಳ್ಳಿ.
    • ಈಗ,ಬೇಯಿಸಿದ ಸಂಬಾರ ಸೊಪ್ಪು, ಹಸಿಮೆಣಸು, ಕಾಯಿತುರಿ, ಮೊಸರು, ಉಪ್ಪು ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ.
    • ರುಬ್ಬಿಟ್ಟ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಅರಶಿನ,ಒಣಮೆಣಸು, ಕರಿಬೇವು,ಇಂಗಿನ ಒಗ್ಗರಣ್ಣೆ ಕೊಡಿ.
    • ಈ ಚಟ್ನಿ ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

    ಸಂಬಾರ ಸೊಪ್ಪಿನ ತಂಬ್ಳಿ


    ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
    ಬೇಕಾಗುವ ಸಾಮಗ್ರಿಗಳು:

    • ಸಂಬಾರ ಸೊಪ್ಪು 10
    • ಕಾಯಿತುರಿ 1ಕಪ್
    • ಹಸಿ ಮೆಣಸು1
    • ಉಪ್ಪು
    • ಮೊಸರು ಅಥವಾ ಮಜ್ಜಿಗೆ 1ಕಪ್
    • ಎಣ್ಣೆ
    • ಸಾಸಿವೆ ಕಾಳು
    • ಅರಶಿನ
    • ಒಣಮೆಣಸು 1
    • ಇಂಗು
    ಮಾಡುವ ವಿಧಾನ:
    • ಒಂದು ಪಾತ್ರೆಗೆ 2ಚಮಚ ಎಣ್ಣೆ ಹಾಕಿ ಸಂಬಾರ ಸೊಪ್ಪನ್ನು ಹುರಿದು ಇಟ್ಟುಕೊಳ್ಳಿ.
    • ಕಾಯಿತುರಿ,ಸಂಬಾರ ಸೊಪ್ಪು,ಹಸಿ ಮೆಣಸನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ.
    • ರುಬ್ಬಿದ ಮಿಶ್ರಣಕ್ಕೆ ಮೊಸರು ಮತ್ತು ಉಪ್ಪು ಹಾಕಿ.
    • ರುಬ್ಬಿದ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಒಣಮೆಣಸು, ಅರಿಶಿನ, ಇಂಗಿನ ಒಗ್ಗರಣ್ಣೆ ಕೊಡಿ.
    • ಸಂಬಾರಸೊಪ್ಪಿನ ತಂಬ್ಳಿ ಅನ್ನದೊಂದಿಗೆ ಸವಿಯಲು ತುಂಬಾ ರುಚಿ.

    ಬದನೆಕಾಯಿ ಮೊಸರು ಗೊಜ್ಜು


    ತಯಾರಿಸಲು ಬೇಕಾಗುವ ಅವಧಿ:10-15ನಿಮಿಷ
    4 ಜನರಿಗೆ ಸಾಕಾಗುತ್ತದೆ.
    ಬೇಕಾಗುವ ಸಾಮಗ್ರಿಗಳು:
    • ಬದನೆಕಾಯಿ 2
    • ಹಸಿಮೆಣಸು 2 ಅಥವಾ ಸಣ್ಣಮೆಣಸು 5-10
    • ಹುಳಿಮೊಸರು 1/4ಕಪ್
    • ಇಂಗು ಚಿಟಿಕೆ
    • ಉಳ್ಳಾಗಡ್ಡೆ 1
    • ಉಪ್ಪು
    ಮಾಡುವ ವಿಧಾನ:
    • ಬದನೆಕಾಯಿ ಬೆಂಕಿಯಲ್ಲಿ ಸುಟ್ಟು,ಸಿಪ್ಪೆ ತೆಗೆದು ಹೆಚ್ಚಿಟ್ಟುಕೊಳ್ಳಿ.
    • ಉಳ್ಳಾಗಡ್ಡೆಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
    • ಬದನೆಕಾಯಿ,ಉಳ್ಳಾಗಡ್ಡೆ,ಮೊಸರು,ಇಂಗು,ಉಪ್ಪು ಹಾಕಿಡಿ.
    • ಸಣ್ಣಮೆಣಸನ್ನು ಜಜ್ಜಿ,ಬದನೆಕಾಯಿ ಮಿಶ್ರಣಕ್ಕೆ ಹಾಕಿ ಸರಿಯಾಗಿ ಕಲಸಿ.

    ಬದನೆಕಾಯಿ ಒಣಗೊಜ್ಜು


    ತಯಾರಿಸಲು ಬೇಕಾಗುವ ಅವಧಿ:10-15ನಿಮಿಷ
    4 ಜನರಿಗೆ ಸಾಕಾಗುತ್ತದೆ.
    ಬೇಕಾಗುವ ಸಾಮಗ್ರಿಗಳು:
    • ಬದನೆಕಾಯಿ 2
    • ಹಸಿಮೆಣಸು 1
    • ಒಣಮೆಣಸು 1
    • ಎಣ್ಣೆ
    • ಸಾಸಿವೆ ಕಾಳು
    • ಅರಶಿನ ಚಿಟಿಕೆ
    • ಇಂಗು ಚಿಟಿಕೆ
    • ಕಾಯಿತುರಿ 1/2ಕಪ್ optional
    • ಉಳ್ಳಾಗಡ್ಡೆ 1
    • ಉಪ್ಪು
    • ಹುಣಸೆಹಣ್ಣು ಸಣ್ಣ ಚೂರು/ಟೊಮೇಟೊ 1
    • ಬೆಲ್ಲ ಅಥವಾ ಸಕ್ಕರೆ ಚಿಟಿಕೆ
     



    ಮಾಡುವ ವಿಧಾನ:
    • ಬದನೆಕಾಯಿ ಬೆಂಕಿಯಲ್ಲಿ ಸುಟ್ಟು,ಸಿಪ್ಪೆ ತೆಗೆದು ಹೆಚ್ಚಿಟ್ಟುಕೊಳ್ಳಿ.
    • ಉಳ್ಳಾಗಡ್ಡೆಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
    • ಹಸಿಮೆಣಸನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
    • ಹೆಚ್ಚಿದ ಬದನೆಕಾಯಿ,ಉಳ್ಳಾಗಡ್ಡೆ,ಹಸಿಮೆಣಸು,ಕಾಯಿತುರಿ,ಉಪ್ಪು,ಬೆಲ್ಲ,ಹುಣಸೆ ಹಣ್ಣು ಹಾಕಿ ಕಲಸಿಟ್ಟುಕೊಳ್ಳಿ.
    • ಎಣ್ಣೆ,ಸಾಸಿವೆ ಕಾಳು,ಒಣಮೆಣಸು,ಇಂಗು,ಅರಶಿನದ ಒಗ್ಗರಣ್ಣೆ ಕೊಟ್ಟು ಚೆನ್ನಾಗಿ ಮೆಣಸನ್ನು ನುರಿದು ಕೈ ಇಂದ ಕಲಸಿ.
    • ಇದು ಅನ್ನದ ಜೊತೆಗೆ ಚೆನ್ನಾಗಿರುತ್ತದೆ.

    ಬದನೆಕಾಯಿ ಬಜ್ಜಿ


    ತಯಾರಿಸಲು ಬೇಕಾಗುವ ಅವಧಿ:
    15-20ನಿಮಿಷ

    ಬೇಕಾಗುವ ಸಾಮಗ್ರಿಗಳು:
    • ಬದನೆಕಾಯಿ 1
    • ಕಾಯಿತುರಿ 1ಕಪ್
    • ಮೊಸರು 1ಕಪ್
    • ಹಸಿಮೆಣಸು 1-2 ಸಣ್ಣಗೆ ಹೆಚ್ಚಿದ್ದು
    • ಈರುಳ್ಳಿ  1 ಸಣ್ಣಗೆ ಹೆಚ್ಚಿದ್ದು  
    • ಒಣಮೆಣಸು 1
    • ಎಣ್ಣೆ
    • ಸಾಸಿವೆ ಕಾಳು 1/2 ಚಮಚ
    • ಅರಿಶಿನ ಚಿಟಿಕೆ
    • ಇಂಗು
    • ಉಪ್ಪು ರುಚಿಗೆ
    ಮಾಡುವ ವಿಧಾನ:
    • ಬದನೆಕಾಯಿಯನ್ನು ಬೆಂಕಿಯಲ್ಲಿ ಸುಟ್ಟು,ಸಿಪ್ಪೆ ತೆಗೆದು,ಹೆಚ್ಚಿ ಅದಕ್ಕೆ ಮೊಸರು ಸೇರಿಸಿಟ್ಟುಕೊಳ್ಳಿ.(ಬದನೆಕಾಯಿ ಬಣ್ಣ ಬದಲಾಗುತ್ತದೆ)
    • ಕಾಯಿತುರಿಯನ್ನು ರುಬ್ಬಿ,ಹೆಚ್ಚಿದ ಬದನೆಕಾಯಿಗೆ ಸೇರಿಸಬೇಕು.
    • ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸನ್ನು ಬಜ್ಜಿಗೆ ಹಾಕಿ.
    • ಎಣ್ಣೆ, ಸಾಸಿವೆ ಕಾಳು, ಒಣಮೆಣಸು, ಅರಿಶಿನ, ಇಂಗಿನ ಒಗ್ಗರಣ್ಣೆ ಕೊಡಿ.
    • ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ,ಚೆನ್ನಾಗಿ ಕರಡಿ.
    • ಬದನೆಕಾಯಿ ಬಜ್ಜಿ ಅನ್ನದೊಂದಿಗೆ ಚೆನ್ನಾಗಿರುತ್ತದೆ.

    ನೆಗಡಿಗೆ ಕಷಾಯ


    ಬೇಕಾಗುವ ಸಾಮಗ್ರಿಗಳು:
    • ಶುಂಠಿ ಒಂದಿಂಚು
    • ಕಾಳು ಮೆಣಸು 10
    • ಜೀರಿಗೆ 4ಚಮಚ 
    • ಕುತುಂಬರಿ 4ಚಮಚ
    • ಒಂದೆಲಗ 1ಕಟ್
    • ಜೇಷ್ಟಮಧು
    • ಮೆಂತ್ಯಪುಡಿ 1ಚಮಚ
    • ನೀರು 4ಕಪ್
    • ಬೆಲ್ಲ
    • ಜೇನುತುಪ್ಪ 2ಚಮಚ
    • ಲಿಂಬುರಸ 2ಚಮಚ
    ಮಾಡುವ ವಿಧಾನ:
    • ಶುಂಠಿ, ಕಾಳು ಮೆಣಸು, ಜೀರಿಗೆ, ಕುತುಂಬರಿ ಮತ್ತು ಒಂದೆಲಗವನ್ನು ಸ್ವಲ್ಪ ನೀರನ್ನು ಹಾಕಿ ರುಬ್ಬಿಟ್ಟುಕೊಳ್ಳಿ.
    • ರುಬ್ಬಿಟ್ಟ ಮಿಶ್ರಣಕ್ಕೆ 4ಕಪ್ ನೀರು,ಮೆಂತ್ಯ ಪುಡಿ,ಬೆಲ್ಲ ಎಲ್ಲವನ್ನು  ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಸಿ.4ಕಪ್ ಇರುವ ನೀರು 2ಕಪ್ ಆಗುವ ತನಕ ಕುದಿಸಿ.
    • ಕಷಾಯ ಕುಡಿಯುವಾಗ ಜೇನುತುಪ್ಪ ಮತ್ತು ಲಿಂಬುರಸ  ಹಾಕಿ ಕುಡಿಯಿರಿ.

    ರಾಗಿ ಅಂಬಲಿ


    ಬೇಕಾಗುವ ಸಾಮಗ್ರಿಗಳು:

    • ರಾಗಿ ಹಿಟ್ಟು 2ಚಮಚ
    • ನೀರು 2ಕಪ್
    • ಸಕ್ಕರೆ ಅಥವಾ ಬೆಲ್ಲ

    ಮಾಡುವ ವಿಧಾನ:
    • ನೀರನ್ನು ಕುದಿಯಲು ಇಡಿ.
    • ರಾಗಿ ಹಿಟ್ಟನ್ನು ತಣ್ಣೀರಿನಲ್ಲಿ ಕರಡಿ,ಕುದಿಯುತ್ತಿರುವ ನೀರಿಗೆ ಹಾಕಿ ಕರಡುತ್ತಿರಿ.
    • ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಕುದಿಸಿ.

    ರಾಗಿರೊಟ್ಟಿ(Millet Roti)


    Click here for english.
    ಬೇಕಾಗುವ ಸಾಮಗ್ರಿಗಳು:
    • ರಾಗಿಹಿಟ್ಟು 1ಕಪ್
    • ಕೊತ್ತಂಬರಿ ಸೊಪ್ಪು ಹೆಚ್ಚಿದ್ದು 4ಚಮಚ
    • ಹಸಿ ಮೆಣಸು 1 ಸಣ್ಣಗೆ ಹೆಚ್ಚಿದ್ದು
    • ಉಪ್ಪು
    • ಉಳ್ಳಾಗಡ್ಡೆ 1ಸಣ್ಣಗೆ ಹೆಚ್ಚಿದ್ದು
    • ಎಣ್ಣೆ 4ಚಮಚ

    ಮಾಡುವ ವಿಧಾನ:
    • ರಾಗಿ ಹಿಟ್ಟು,ಕೊತ್ತಂಬರಿ ಸೊಪ್ಪು,ಹಸಿಮೆಣಸು,ಉಳ್ಳಾಗಡ್ಡೆ,ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಹಿಟ್ಟನ್ನು ಕಲಸಿ.
    • ಒಂದು ಪ್ಲಾಸ್ಟಿಕ್ ಅಥವಾ ಬಾಳೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿ.
    • ಒಂದು ನಿಂಬೆ ಆಕಾರದ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ರೊಟ್ಟಿ ಆಕಾರ ಕೊಡಿ.
    • ತವಾ ಬಿಸಿಯಾದ ನಂತರ,ರೊಟ್ಟಿಯನ್ನು ಸುಟ್ಟು ಚಟ್ನಿ ಜೊತೆ ಸವಿಯಲು ಕೊಡಿ.

    ರಾಗಿವಡೆ(Millet Vada)


    Click here for English

    ಬೇಕಾಗುವ ಸಾಮಗ್ರಿಗಳು:
    • ರಾಗಿಹಿಟ್ಟು 1ಕಪ್
    • ಪುಟಾನಿ 6ಚಮಚ
    • ಶೇಂಗಾ  6ಚಮಚ
    • ಕೊತ್ತಂಬರಿ ಸೊಪ್ಪು ಹೆಚ್ಚಿದ್ದು 4ಚಮಚ
    • ಹಸಿ ಮೆಣಸು 1 ಸಣ್ಣಗೆ ಹೆಚ್ಚಿದ್ದು
    • ಉಪ್ಪು
    • ಉಳ್ಳಾಗಡ್ಡೆ 1ಸಣ್ಣಗೆ ಹೆಚ್ಚಿದ್ದು
    • ಕರಿಯಲು ಎಣ್ಣೆ

    ಮಾಡುವ ವಿಧಾನ:
    • ಶೇಂಗಾ & ಪುಟಾಣಿಯನ್ನು ತರಿ ತರಿಯಾಗಿ ಪುಡಿಮಾಡಿಟ್ಟುಕೊಳ್ಳಿ.
    • ರಾಗಿ ಹಿಟ್ಟು,ಪುಟಾಣಿ & ಶೇಂಗಾ ಪುಡಿ,ಕುತುಂಬರಿ ಸೊಪ್ಪು,ಹಸಿಮೆಣಸು,ಉಳ್ಳಾಗಡ್ಡೆ,ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಹಿಟ್ಟನ್ನು ಕಲಸಿ.
    • ಎಣ್ಣೆಯನ್ನು ಕಾಯಲು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಿ.
    • ಒಂದು ಸಣ್ಣ ನಿಂಬೆಹಣ್ಣಿನಷ್ಟು ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ವಡೆ ಆಕಾರ ಕೊಟ್ಟು ಅದನ್ನು ಕಾದಿರುವ ಎಣ್ಣೆಯಲ್ಲಿ ಕರಿಯಿರಿ.
    • ಇದನ್ನು ಚಹದ ಜೊತೆ ಸವಿಯಲು ಕೊಡಿ.

    ಬಾಳೆಹಣ್ಣಿನ ಮುಳ್ಕ


    ತಯಾರಿಸಲು ಬೇಕಾಗುವ ಸಮಯ: 10-15 ನಿಮಿಷ

    ಬೇಕಾಗುವ ಸಾಮಗ್ರಿಗಳು:
    • ಅಕ್ಕಿ ಹಿಟ್ಟು1ಕಪ್
    • ಬಾಳೆ ಹಣ್ಣು 2-4
    • ಬಿಸಿ ನೀರು 1/2ಕಪ್
    • ಎಣ್ಣೆ ಕರಿಯಲು
    • ಉಪ್ಪು ಸ್ವಲ್ಪ
    • ಏಲಕ್ಕಿ ಪುಡಿ
    • ಸಕ್ಕರೆ ಅಥವಾ ಬೆಲ್ಲ
    ಮಾಡುವ ವಿಧಾನ:
    • ಬಾಳೆಹಣ್ಣನ್ನು ಗಿವುಚಿ,ಅದಕ್ಕೆ ಸಕ್ಕರೆ ಅಥವಾ ಬೆಲ್ಲ, ಉಪ್ಪು,ಏಲಕ್ಕಿ,ಅಕ್ಕಿ ಹಿಟ್ಟು,ಬಿಸಿ ನೀರು ಹಾಕಿ ಹಿಟ್ಟನ್ನು ಕಲಸಿ.(rice pulp use ಮಾಡಿದರೆ ಇನ್ನು ಚೆನ್ನಾಗಿರುತ್ತದೆ.)
    • ಹಿಟ್ಟನ್ನು ಬಹಳ ಗಟ್ಟಿಯಾಗಿ ಕಲಸಿಕೊಳ್ಳಬೇಡಿ.
    • ಎಣ್ಣೆಯನ್ನು ಕಾಯಲು ಇಡಿ.
    • ಎಣ್ಣೆ ಕಾದ ನಂತರ ಸಾವಕಾಶವಾಗಿ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಎಣ್ಣೆಯಲ್ಲಿ ಬಿಡಿ.
    • ಸರಿಯಾಗಿ ಬೆಂದ ನಂತರ ತೆಗೆಯಿರಿ.
    • ತುಪ್ಪದ ಜೊತೆ ಸವಿಯಲು ಕೊಡಿ.

    ಉದ್ದಿನ ವಡೆ(Split blackgram vada)


    Click here for English
    ಬೇಕಾಗುವ ಸಾಮಗ್ರಿಗಳು:
    • ಉದ್ದಿನ ಬೇಳೆ 1 ಕಪ್
    • ಮೆಣಸಿನ ಕಾಳು 5-6
    • ಕೊಬ್ಬರಿ 10 ಸಣ್ಣಚೂರು
    • ಕರಿಬೇವು
    • ಕೊತ್ತಂಬರಿ ಸೊಪ್ಪು
    • ಶುಂಠಿ 5-6 ಸಣ್ಣಚೂರು
    • ಎಣ್ಣೆ
    ಮಾಡುವ ವಿಧಾನ:
    • ಉದ್ದಿನ ಬೇಳೆಯನ್ನು ನೀರಿನಲ್ಲಿ ರಾತ್ರೆ ಇಡಿ ನೆನೆಸಿಡಿ.
    • ಉದ್ದಿನ ಬೇಳೆ ತೊಳೆದು,ಕಡಿಮೆ ನೀರನ್ನು ಬಳಸಿ ರುಬ್ಬಿ.
    • ಬ್ಲೆಂಡರ್ ರುಬ್ಬಲು ಬಳಸಿದರೆ,ಹೆಚ್ಚು ಒದಗುತ್ತದೆ.
    • ಹಿಟ್ಟಿಗೆ,ಮೆಣಸಿನ ಕಾಳು,ಕರಿಬೇವು,ಕೊಬ್ಬರಿ,ಕೊತ್ತಂಬರಿ ಸೊಪ್ಪು,ಶುಂಠಿ,ಉಪ್ಪು ಹಾಕಿ ಸರಿಯಾಗಿ ಕಲಸಿ.
    • ಒಂದು ತೋಪಿನಲ್ಲಿ ನೀರನ್ನು ತೆಗೆದುಕೊಳ್ಳಿ. ಒಂದು ಚಮಚ ಹಿಟ್ಟನ್ನು ಹಾಕಿ ನೋಡಿದರೆ ವಡ ಸರಿಯಾಗಿ ಉಬ್ಬುತ್ತದೊ ಇಲ್ಲವೊ ಗೊತ್ತಾಗುತ್ತದೆ.ಹಿಟ್ಟು ಮುಳುಗಿದರೆ,ಇನ್ನು ಸ್ವಲ್ಪಹೊತ್ತು ಕಲಸುತ್ತಿರಿ.
    • ಎಣ್ಣೆ ಬಿಸಿಗಿಡಿ.ಬಿಸಿಬಂದ ನಂತರ,ಕೈ ನೀರಿನಲ್ಲಿ ಅದ್ದಿ ಒದ್ದೆ ಮಾಡಿಕೊಂಡು ಹಿಟ್ಟನ್ನು ತೆಗೆದುಕೊಳ್ಳಿ.
    • ಹೆಬ್ಬೆರಳಿನಿಂದ ತೂತನ್ನು ಮಾಡಿ ಎಣ್ಣೆಯಲ್ಲಿ ಬಿಡಿ.ಇದೇ ರೀತಿ ಹಿಟ್ಟು ಕಾಲಿಯಾಗುವ ತನಕ ಮಾಡಿ :)
    • ಶುಂಠಿ ಚಟ್ನಿಯೊಂದಿಗೆ ವಡಾ ಚೆನ್ನಾಗಿರುತ್ತದೆ

    ಮೆಣಸಿನ ಚಾಟಿ(Red Chilli Crepes)




    To read it in English
    ಬೇಕಾಗುವ ಸಾಮಗ್ರಿಗಳು:
    • ಅಕ್ಕಿ 1ಕಪ್
    • ಮೊಗೆಕಾಯಿ 1/2
    • ಉಪ್ಪು
    • ಒಣಮೆಣಸು 6-8
    • ಕುತುಂಬರಿ 2 ಚಮಚ
    • ಹಸಿಮೆಣಸು 1-2
    • ಕರಿಬೇವು
    • ಕಾಯಿತುರಿ 1/2ಕಪ್
    ಮಾಡುವ ವಿಧಾನ:
    • ಅಕ್ಕಿಯನ್ನು ನೀರಿನಲ್ಲಿ 4 ಗಂಟೆ ನೆನೆಸಿಡಿ.
    • ಮೊಗೆಕಾಯಿಯನ್ನು ಕೊಚ್ಚಿಟ್ಟುಕೊಳ್ಳಿ.
    • ಅಕ್ಕಿ,ಮೊಗೆಕಾಯಿ,ಒಣಮೆಣಸು,ಕುತುಂಬರಿ,ನೀರು ಹಾಕಿ ರುಬ್ಬಿ.
    • ಈ ಹಿಟ್ಟನ್ನು ರಾತ್ರೆ ಹಾಗೆ ಬಿಡಿ.
    • ದೋಸೆ ಎರೆಯುವ ಮೊದಲು,ಉಳ್ಳಾಗಡ್ಡೆ,ಕೊತ್ತಂಬರಿ ಸೊಪ್ಪು,ಹಸಿಮೆಣಸು,ಕರಿಬೇವು,ಕಾಯಿತುರಿ,ಉಪ್ಪು ಹಾಕಿ ಚೆನ್ನಾಗಿ ಕಲಸಿ.
    • ದೋಸೆ ಕಾವಲಿಯನ್ನು ಬಿಸಿಗಿಡಿ.
    • ಕಾವಲಿ ಬಿಸಿಬಂದ ನಂತರ ಕಾವಲಿಗೆ ಎಣ್ಣೆ ಸವರಿ,ದಪ್ಪಾದ ಚಾಟಿ ಎರೆಯಿರಿ.
    • ಅದನು ಮುಚ್ಚಿಡಿ.ಎರಡು ಬದಿಗೂ ಬೇಯಿಸಿ.
    • ಈ ದೋಸೆಯನ್ನು ಕಾಯಿಸುಳಿ ಬೆಲ್ಲ ಮತ್ತು ತುಪ್ಪದೊಂದಿಗೆ ಸವಿಯಲು ಕೊಡಿ.

    ಕನ್ನೆ ಕೊಡಿ ತಂಬ್ಳಿ



    ತಯಾರಿಸಲು ಬೇಕಾಗುವ ಸಮಯ: 10-15 ನಿಮಿಷ

    ಬೇಕಾಗುವ ಸಾಮಗ್ರಿಗಳು:

    • ಕನ್ನೆ ಕೊಡಿ 1ಕಪ್
    • ಕಾಯಿತುರಿ 1ಕಪ್
    • ಹಸಿ ಮೆಣಸು 1
    • ಉಪ್ಪು 3/4 ಚಮಚ
    • ಮಜ್ಜಿಗೆ 1ಕಪ್
    • ಎಣ್ಣೆ 1ಚಮಚ
    • ಒಣಮೆಣಸು 1
    • ಸಾಸಿವೆಕಾಳು 1/2ಚಮಚ
    ಮಾಡುವ ವಿಧಾನ:
    • ಹಸಿ ಮೆಣಸು,ಕನ್ನೆ ಕೊಡಿಗೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಹೊರೆದಿಟ್ಟುಕೊಳ್ಳಿ.
    • ಒಣಮೆಣಸು ಕತ್ತರಿಸಿಟ್ಟುಕೊಳ್ಳಿ.
    • ಕಾಯಿತುರಿ,ಕನ್ನೆ ಕೊಡಿ ಬೀಸಿಟ್ಟುಕೊಳ್ಳಿ.
    • ಬೀಸಿಟ್ಕಂಡ ಮಿಶ್ರಣಕ್ಕೆ,ಮಜ್ಜಿಗೆ,ಉಪ್ಪು,ನೀರು (ಬೇಕಾದರೆ)ಹಾಕಿ ಕರಡಿಟ್ಕಳಿ.
    • ಎಣ್ಣೆ,ಸಾಸಿವೆ,ಒಣಮೆಣಸಿನ ಒಗ್ಗರಣ್ಣೆ ಕೊಡಿ.
    • ಕನ್ನೆ ಕೊಡಿ ತಂಬ್ಳಿ ಸವಿಯಲು ಸಿದ್ಧ.
     

    ವಾತಂಗಿ ಸೊಪ್ಪಿನ ಚಟ್ನಿ


    ತಯಾರಿಸಲು ಬೇಕಾಗುವ ಸಮಯ:10-15ನಿಮಿಷ

    ಬೇಕಾಗುವ ಸಾಮಗ್ರಿಗಳು:
    • ವಾತಂಗಿ ಸೊಪ್ಪು 10-15
    • ಕಾಯಿತುರಿ 1ಕಪ್
    • ಉಪ್ಪು
    • ಹುಣಸೆ ಹಣ್ಣು ಒಂದು ಸಣ್ಣ ನಿಂಬೆ ಗಾತ್ರದ್ದು.
    • ಬೆಲ್ಲ 1ಚಮಚ
    • ಎಣ್ಣೆ
    • ಒಣ ಮೆಣಸು 6-8
    • ಕುತುಂಬರಿ 2 ಚಮಚ
    • ಕಡ್ಲೆ ಬೇಳೆ 1 ಚಮಚ
    • ಉದ್ದಿನ ಬೇಳೆ 1 ಚಮಚ
    ಮಾಡುವ ವಿಧಾನ:
    • ಒಂದು ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಬಿಸಿ ಬಂದ ನಂತರ,ಅದಕ್ಕೆ ವಾತಂಗಿ ಸೊಪ್ಪನ್ನು ಹಾಕಿ ಹೊರಿಯಿರಿ.ಅದನ್ನು ಮಿಕ್ಸಿಗೆ ಹಾಕಿಡಿ.
    • ನಂತರ,2ಚಮಚ ಎಣ್ಣೆ ಬಿಸಿ ಆದ ನಂತರ ಅದಕ್ಕೆ,ಕಡ್ಲೆ ಬೇಳೆ,ಉದ್ದಿನ ಬೇಳೆ,ಕುತುಂಬರಿ,ಒಣಮೆಣಸು ಹಾಕಿ ಹೊರಿದು,ಮಿಕ್ಸಿಗೆ ಹಾಕಿ ಕಾಯಿತುರಿ,ಹುಣಸೆ ಹಣ್ಣು,ಬೆಲ್ಲ,ನೀರು ಸೇರಿಸಿ ರುಬ್ಬಿ.
    • ವಾತಂಗಿ ಸೊಪ್ಪಿನ ಚಟ್ನಿ ಬಿಸಿ ಬಿಸಿ ಅನ್ನ ಮತ್ತು ಮೊಸರಿನೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

    ಉದ್ದಿನ ಕಾಳು ದೋಸೆ(Blackgram Crepes)


    ಬೇಕಾಗುವ ಸಾಮಗ್ರಿಗಳು:
    • ಅಕ್ಕಿ 1ಕಪ್
    • ಎಣ್ಣೆ (ಬೇಕಾದರೆ)
    • ಉಪ್ಪು
    • ಉದ್ದಿನ ಬೇಳೆ/ಕಾಳು 1/2ಕಪ್

    ಮಾಡುವ ವಿಧಾನ:
    • ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಿ.
    • ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ತೊಳೆದು ರುಬ್ಬಿ.
    • ಈ ಹಿಟ್ಟನ್ನು ರಾತ್ರೆ ಇಡೀ ಹಾಗೆ ಬಿಡಿ.
    • ಉಪ್ಪು,ನೀರು ಹಾಕಿ ಕರಡಿ.
    • ದೋಸೆ ಕಾವಲಿ ಬಿಸಿಗಿಡಿ.
    • ದೋಸೆ ಕಾವಲಿ ಬಿಸಿ ಬಂದ ನಂತರ ದೋಸೆ ಎರೆಯಿರಿ.(ದೋಸೆ ತೆಳ್ಳಗಿರಲಿ)
    • ದೋಸೆ ಎರೆಯುವಾಗ ಎಣ್ಣೆ ಬೇಕಾದರೆ ಹಚ್ಚ ಬಹುದು.
    • ಈ ದೋಸೆ ಪುಟಾಣಿ ಚಟ್ನಿ ಮತ್ತು ತಡುವೆ (ಜೇನು) ತುಪ್ಪದೊಂದಿಗೆ ಚೆನ್ನಾಗಿರುತ್ತದೆ

    Saturday, 10 September 2011

    ದಾಸವಾಳದ ಎಲೆ ದೋಸೆ(Hibiscus crepes)


    ಬೇಕಾಗುವ ಸಾಮಗ್ರಿಗಳು:
    • ದಾಸವಾಳದ ಎಲೆ 1ಕಪ್
    • ಅಕ್ಕಿ 1ಕಪ್ 
    • ಎಣ್ಣೆ (ಬೇಕಾದರೆ)
    • ಉಪ್ಪು 
    ಮಾಡುವ ವಿಧಾನ:
    • ಅಕ್ಕಿಯನ್ನು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಿ. 
    • ಅಕ್ಕಿ ಮತ್ತು ದಾಸವಾಳದ ಎಲೆಯನ್ನು ರುಬ್ಬಿ.
    • ಈ ಹಿಟ್ಟನ್ನು ರಾತ್ರೆ ಇಡೀ ಹಾಗೆ ಬಿಡಿ. 
    •  ಉಪ್ಪು,ನೀರು  ಹಾಕಿ ಕರಡಿ.
    • ದೋಸೆ ಕಾವಲಿ ಬಿಸಿ ಬಂದ ನಂತರ ದೋಸೆ ಎರೆಯಿರಿ.(ದೋಸೆ ತೆಳ್ಳಗಿರಲಿ)
    • ಈ ದೋಸೆ ಚಟ್ನಿ ಮತ್ತು ತಡುವೆ (ಜೇನು) ತುಪ್ಪದೊಂದಿಗೆ ಸವಿಯಲು ರುಚಿಯಾಗಿರುತ್ತದೆ.

    ನೆಲ್ಲಿಕಾಯಿ ತಂಬ್ಳಿ



    ತಯಾರಿಸಲು ಬೇಕಾಗುವ ಸಮಯ: 10 ನಿಮಿಷ

    ಬೇಕಾಗುವ ಸಾಮಗ್ರಿಗಳು:
    • ನೆಲ್ಲಿಕಾಯಿ 6
    • ಕಾಯಿತುರಿ 1ಕಪ್
    • ಉಪ್ಪು 3/4 ಚಮಚ
    • ಮಜ್ಜಿಗೆ 1ಕಪ್ 
    • ಎಣ್ಣೆ 1ಚಮಚ
    •  ಜೀರಿಗೆ 1ಚಮಚ 
    • ಹಸಿ ಮೆಣಸು 1 
    • ಒಣಮೆಣಸು 1
    • ಸಾಸಿವೆಕಾಳು 1/2ಚಮಚ

    ಮಾಡುವ ವಿಧಾನ:
    • ನೆಲ್ಲಿಕಾಯಿ ತುಂಡುಮಾಡಿ ಇಟ್ಕಳಿ.
    • ಮೆಣಸು ಕತ್ತರಿಸಿಟ್ಕಳಿ.
    • ಕಾಯಿತುರಿ,ನೆಲ್ಲಿಕಾಯಿ,ಹಸಿ ಮೆಣಸು,ಜೀರಿಗೆ  ತೆಕಂಡು ಬೀಸಿಟ್ಕಳಿ. 
    • ಬೀಸಿಟ್ಕಂಡ ಮಿಶ್ರಣಕ್ಕೆ,ಮಜ್ಜಿಗೆ,ಉಪ್ಪು,ನೀರು ಬೇಕಾದರೆ ಹಾಕಿ ಕರಡಿ.
    • ಎಣ್ಣೆ,ಸಾಸಿವೆ,ಒಣಮೆಣಸಿನ ಒಗ್ಗರಣ್ಣೆ ಕೊಟ್ಟರೆ ನೆಲ್ಲಿಕಾಯಿ ತಂಬ್ಳಿ ಸವಿಯಲು ಸಿದ್ಧ.