ತಯಾರಿಸಲು ಬೇಕಾಗುವ ಅವಧಿ:10-15ನಿಮಿಷ
4 ಜನರಿಗೆ ಸಾಕಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
- ಬದನೆಕಾಯಿ 2
- ಹಸಿಮೆಣಸು 1
- ಒಣಮೆಣಸು 1
- ಎಣ್ಣೆ
- ಸಾಸಿವೆ ಕಾಳು
- ಅರಶಿನ ಚಿಟಿಕೆ
- ಇಂಗು ಚಿಟಿಕೆ
- ಕಾಯಿತುರಿ 1/2ಕಪ್ optional
- ಉಳ್ಳಾಗಡ್ಡೆ 1
- ಉಪ್ಪು
- ಹುಣಸೆಹಣ್ಣು ಸಣ್ಣ ಚೂರು/ಟೊಮೇಟೊ 1
- ಬೆಲ್ಲ ಅಥವಾ ಸಕ್ಕರೆ ಚಿಟಿಕೆ
- ಬದನೆಕಾಯಿ ಬೆಂಕಿಯಲ್ಲಿ ಸುಟ್ಟು,ಸಿಪ್ಪೆ ತೆಗೆದು ಹೆಚ್ಚಿಟ್ಟುಕೊಳ್ಳಿ.
- ಉಳ್ಳಾಗಡ್ಡೆಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
- ಹಸಿಮೆಣಸನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
- ಹೆಚ್ಚಿದ ಬದನೆಕಾಯಿ,ಉಳ್ಳಾಗಡ್ಡೆ,ಹಸಿಮೆಣಸು,ಕಾಯಿತುರಿ,ಉಪ್ಪು,ಬೆಲ್ಲ,ಹುಣಸೆ ಹಣ್ಣು ಹಾಕಿ ಕಲಸಿಟ್ಟುಕೊಳ್ಳಿ.
- ಎಣ್ಣೆ,ಸಾಸಿವೆ ಕಾಳು,ಒಣಮೆಣಸು,ಇಂಗು,ಅರಶಿನದ ಒಗ್ಗರಣ್ಣೆ ಕೊಟ್ಟು ಚೆನ್ನಾಗಿ ಮೆಣಸನ್ನು ನುರಿದು ಕೈ ಇಂದ ಕಲಸಿ.
- ಇದು ಅನ್ನದ ಜೊತೆಗೆ ಚೆನ್ನಾಗಿರುತ್ತದೆ.
No comments:
Post a Comment