ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
ಬೇಕಾಗುವ ಸಾಮಗ್ರಿಗಳು:
- ತಗಟೆ ಸೊಪ್ಪು 1 ಕಪ್
- ಕಾಯಿತುರಿ 1ಕಪ್
- ಬೋಳ ಕಾಳು(ಮೆಣಸಿನ ಕಾಳು) 4
- ಜೀರಿಗೆ 1ಚಮಚ
- ಉಪ್ಪು
- ಮೊಸರು ಅಥವಾ ಮಜ್ಜಿಗೆ 1ಕಪ್
- ಎಣ್ಣೆ
- ಸಾಸಿವೆ ಕಾಳು
- ಅರಶಿನ
- ಒಣಮೆಣಸು 1
- ಇಂಗು
ಮಾಡುವ ವಿಧಾನ:
- ಒಂದು ಪಾತ್ರೆಗೆ 2ಚಮಚ ಎಣ್ಣೆ ಹಾಕಿ ತಗಟೆ ಸೊಪ್ಪನ್ನು ಹೊರಿದು ಇಟ್ಟುಕೊಳ್ಳಿ.
- ಜೀರಿಗೆ ಮತ್ತು ಮೆಣಸಿನ ಕಾಳನ್ನು ಹೊರಿದಿಟ್ಟುಕೊಳ್ಳಿ.
- ಕಾಯಿತುರಿ, ತಗಟೆ ಸೊಪ್ಪು, ಜೀರಿಗೆ,ಮೆಣಸಿನ ಕಾಳನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ.
- ರುಬ್ಬಿದ ಮಿಶ್ರಣಕ್ಕೆ ಮೊಸರು ಮತ್ತು ಉಪ್ಪು ಹಾಕಿ.
- ರುಬ್ಬಿದ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಒಣಮೆಣಸು, ಅರಿಶಿನ, ಇಂಗಿನ ಒಗ್ಗರಣ್ಣೆ ಕೊಡಿ.
- ತಗಟೆ ಸೊಪ್ಪಿನ ತಂಬ್ಳಿ ಅನ್ನದೊಂದಿಗೆ ಸವಿಯಲು ತುಂಬಾ ರುಚಿ.
No comments:
Post a Comment