ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
ಬೇಕಾಗುವ ಸಾಮಗ್ರಿಗಳು:
- ಸಂಬಾರ ಸೊಪ್ಪು 10
- ಕಾಯಿತುರಿ 1ಕಪ್
- ಹಸಿ ಮೆಣಸು1
- ಉಪ್ಪು
- ಮೊಸರು ಅಥವಾ ಮಜ್ಜಿಗೆ 1ಕಪ್
- ಎಣ್ಣೆ
- ಸಾಸಿವೆ ಕಾಳು
- ಅರಶಿನ
- ಒಣಮೆಣಸು 1
- ಇಂಗು
ಮಾಡುವ ವಿಧಾನ:
- ಒಂದು ಪಾತ್ರೆಗೆ 2ಚಮಚ ಎಣ್ಣೆ ಹಾಕಿ ಸಂಬಾರ ಸೊಪ್ಪನ್ನು ಹುರಿದು ಇಟ್ಟುಕೊಳ್ಳಿ.
- ಕಾಯಿತುರಿ,ಸಂಬಾರ ಸೊಪ್ಪು,ಹಸಿ ಮೆಣಸನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ.
- ರುಬ್ಬಿದ ಮಿಶ್ರಣಕ್ಕೆ ಮೊಸರು ಮತ್ತು ಉಪ್ಪು ಹಾಕಿ.
- ರುಬ್ಬಿದ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಒಣಮೆಣಸು, ಅರಿಶಿನ, ಇಂಗಿನ ಒಗ್ಗರಣ್ಣೆ ಕೊಡಿ.
- ಸಂಬಾರಸೊಪ್ಪಿನ ತಂಬ್ಳಿ ಅನ್ನದೊಂದಿಗೆ ಸವಿಯಲು ತುಂಬಾ ರುಚಿ.
No comments:
Post a Comment