ತಯಾರಿಸಲು ಬೇಕಾಗುವ ಸಮಯ: 10-15 ನಿಮಿಷ
ಬೇಕಾಗುವ ಸಾಮಗ್ರಿಗಳು:
- ಅಕ್ಕಿ ಹಿಟ್ಟು1ಕಪ್
- ಬಾಳೆ ಹಣ್ಣು 2-4
- ಬಿಸಿ ನೀರು 1/2ಕಪ್
- ಎಣ್ಣೆ ಕರಿಯಲು
- ಉಪ್ಪು ಸ್ವಲ್ಪ
- ಏಲಕ್ಕಿ ಪುಡಿ
- ಸಕ್ಕರೆ ಅಥವಾ ಬೆಲ್ಲ
ಮಾಡುವ ವಿಧಾನ:
- ಬಾಳೆಹಣ್ಣನ್ನು ಗಿವುಚಿ,ಅದಕ್ಕೆ ಸಕ್ಕರೆ ಅಥವಾ ಬೆಲ್ಲ, ಉಪ್ಪು,ಏಲಕ್ಕಿ,ಅಕ್ಕಿ ಹಿಟ್ಟು,ಬಿಸಿ ನೀರು ಹಾಕಿ ಹಿಟ್ಟನ್ನು ಕಲಸಿ.(rice pulp use ಮಾಡಿದರೆ ಇನ್ನು ಚೆನ್ನಾಗಿರುತ್ತದೆ.)
- ಹಿಟ್ಟನ್ನು ಬಹಳ ಗಟ್ಟಿಯಾಗಿ ಕಲಸಿಕೊಳ್ಳಬೇಡಿ.
- ಎಣ್ಣೆಯನ್ನು ಕಾಯಲು ಇಡಿ.
- ಎಣ್ಣೆ ಕಾದ ನಂತರ ಸಾವಕಾಶವಾಗಿ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಎಣ್ಣೆಯಲ್ಲಿ ಬಿಡಿ.
- ಸರಿಯಾಗಿ ಬೆಂದ ನಂತರ ತೆಗೆಯಿರಿ.
- ತುಪ್ಪದ ಜೊತೆ ಸವಿಯಲು ಕೊಡಿ.
No comments:
Post a Comment