Click here for English
ಬೇಕಾಗುವ ಸಾಮಗ್ರಿಗಳು:
- ಉದ್ದಿನ ಬೇಳೆ 1 ಕಪ್
- ಮೆಣಸಿನ ಕಾಳು 5-6
- ಕೊಬ್ಬರಿ 10 ಸಣ್ಣಚೂರು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಶುಂಠಿ 5-6 ಸಣ್ಣಚೂರು
- ಎಣ್ಣೆ
- ಉದ್ದಿನ ಬೇಳೆಯನ್ನು ನೀರಿನಲ್ಲಿ ರಾತ್ರೆ ಇಡಿ ನೆನೆಸಿಡಿ.
- ಉದ್ದಿನ ಬೇಳೆ ತೊಳೆದು,ಕಡಿಮೆ ನೀರನ್ನು ಬಳಸಿ ರುಬ್ಬಿ.
- ಬ್ಲೆಂಡರ್ ರುಬ್ಬಲು ಬಳಸಿದರೆ,ಹೆಚ್ಚು ಒದಗುತ್ತದೆ.
- ಹಿಟ್ಟಿಗೆ,ಮೆಣಸಿನ ಕಾಳು,ಕರಿಬೇವು,ಕೊಬ್ಬರಿ,ಕೊತ್ತಂಬರಿ ಸೊಪ್ಪು,ಶುಂಠಿ,ಉಪ್ಪು ಹಾಕಿ ಸರಿಯಾಗಿ ಕಲಸಿ.
- ಒಂದು ತೋಪಿನಲ್ಲಿ ನೀರನ್ನು ತೆಗೆದುಕೊಳ್ಳಿ. ಒಂದು ಚಮಚ ಹಿಟ್ಟನ್ನು ಹಾಕಿ ನೋಡಿದರೆ ವಡ ಸರಿಯಾಗಿ ಉಬ್ಬುತ್ತದೊ ಇಲ್ಲವೊ ಗೊತ್ತಾಗುತ್ತದೆ.ಹಿಟ್ಟು ಮುಳುಗಿದರೆ,ಇನ್ನು ಸ್ವಲ್ಪಹೊತ್ತು ಕಲಸುತ್ತಿರಿ.
- ಎಣ್ಣೆ ಬಿಸಿಗಿಡಿ.ಬಿಸಿಬಂದ ನಂತರ,ಕೈ ನೀರಿನಲ್ಲಿ ಅದ್ದಿ ಒದ್ದೆ ಮಾಡಿಕೊಂಡು ಹಿಟ್ಟನ್ನು ತೆಗೆದುಕೊಳ್ಳಿ.
- ಹೆಬ್ಬೆರಳಿನಿಂದ ತೂತನ್ನು ಮಾಡಿ ಎಣ್ಣೆಯಲ್ಲಿ ಬಿಡಿ.ಇದೇ ರೀತಿ ಹಿಟ್ಟು ಕಾಲಿಯಾಗುವ ತನಕ ಮಾಡಿ :)
- ಶುಂಠಿ ಚಟ್ನಿಯೊಂದಿಗೆ ವಡಾ ಚೆನ್ನಾಗಿರುತ್ತದೆ
No comments:
Post a Comment