ತಯಾರಿಸಲು ಬೇಕಾಗುವ ಸಮಯ: 10-15 ನಿಮಿಷ
ಬೇಕಾಗುವ ಸಾಮಗ್ರಿಗಳು:
- ವಾತಂಗಿ ಸೊಪ್ಪು 1ಕಪ್
- ಕಾಯಿತುರಿ 1ಕಪ್
- ಹಸಿ ಮೆಣಸು 1
- ಉಪ್ಪು 3/4 ಚಮಚ
- ಮಜ್ಜಿಗೆ 1ಕಪ್
- ಎಣ್ಣೆ 1ಚಮಚ
- ಒಣಮೆಣಸು 1
- ಸಾಸಿವೆಕಾಳು 1/2ಚಮಚ
ಮಾಡುವ ವಿಧಾನ:
- ಹಸಿ ಮೆಣಸು,ವಾತಂಗಿ ಸೊಪ್ಪಿಗೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಹೊರೆದಿಟ್ಟುಕೊಳ್ಳಿ.
- ಒಣಮೆಣಸು ಕತ್ತರಿಸಿಟ್ಟುಕೊಳ್ಳಿ.
- ಕಾಯಿತುರಿ,ವಾತಂಗಿ ಸೊಪ್ಪು ಬೀಸಿಟ್ಟುಕೊಳ್ಳಿ.
- ಬೀಸಿಟ್ಕಂಡ ಮಿಶ್ರಣಕ್ಕೆ,ಮಜ್ಜಿಗೆ,ಉಪ್ಪು,ನೀರು (ಬೇಕಾದರೆ)ಹಾಕಿ ಕರಡಿಟ್ಕಳಿ.
- ಎಣ್ಣೆ,ಸಾಸಿವೆ,ಒಣಮೆಣಸಿನ ಒಗ್ಗರಣ್ಣೆ ಕೊಡಿ.
- ವಾತಂಗಿ ಸೊಪ್ಪಿನ ತಂಬ್ಳಿ ಸವಿಯಲು ಸಿದ್ಧ.
ಶಶಿರೇಖಾ ಅವರೇ ವಾತಂಗಿ ಸೊಪ್ಪಿಗೆ ಬೇರೆ ಭಾಷೆಗಳಲ್ಲಿ ಏನಂತಾರೆ??
ReplyDeleteಗಣೇಶ ಭಟ್ಟ ಅಂತ ಹೇಳಿ ಈ ಪ್ರಶ್ನೆ ಕೇಳ್ತಿರೋದು
ReplyDelete