Click here for English
ಬೇಕಾಗುವ ಸಾಮಗ್ರಿಗಳು:
- ರಾಗಿಹಿಟ್ಟು 1ಕಪ್
- ಪುಟಾನಿ 6ಚಮಚ
- ಶೇಂಗಾ 6ಚಮಚ
- ಕೊತ್ತಂಬರಿ ಸೊಪ್ಪು ಹೆಚ್ಚಿದ್ದು 4ಚಮಚ
- ಹಸಿ ಮೆಣಸು 1 ಸಣ್ಣಗೆ ಹೆಚ್ಚಿದ್ದು
- ಉಪ್ಪು
- ಉಳ್ಳಾಗಡ್ಡೆ 1ಸಣ್ಣಗೆ ಹೆಚ್ಚಿದ್ದು
- ಕರಿಯಲು ಎಣ್ಣೆ
ಮಾಡುವ ವಿಧಾನ:
- ಶೇಂಗಾ & ಪುಟಾಣಿಯನ್ನು ತರಿ ತರಿಯಾಗಿ ಪುಡಿಮಾಡಿಟ್ಟುಕೊಳ್ಳಿ.
- ರಾಗಿ ಹಿಟ್ಟು,ಪುಟಾಣಿ & ಶೇಂಗಾ ಪುಡಿ,ಕುತುಂಬರಿ ಸೊಪ್ಪು,ಹಸಿಮೆಣಸು,ಉಳ್ಳಾಗಡ್ಡೆ,ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಹಿಟ್ಟನ್ನು ಕಲಸಿ.
- ಎಣ್ಣೆಯನ್ನು ಕಾಯಲು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಿ.
- ಒಂದು ಸಣ್ಣ ನಿಂಬೆಹಣ್ಣಿನಷ್ಟು ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ವಡೆ ಆಕಾರ ಕೊಟ್ಟು ಅದನ್ನು ಕಾದಿರುವ ಎಣ್ಣೆಯಲ್ಲಿ ಕರಿಯಿರಿ.
- ಇದನ್ನು ಚಹದ ಜೊತೆ ಸವಿಯಲು ಕೊಡಿ.
No comments:
Post a Comment