Click here for English
ತಯಾರಿಸಲು ಬೇಕಾಗುವ ಸಮಯ: 45 ನಿಮಿಷ
4 ಜನರಿಗೆ ಸಾಕಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
- ಬದನೆಕಾಯಿ 1 ಕತ್ತರಿಸಿದ್ದು
- ಬಾಸ್ಮತಿ ಅಕ್ಕಿ 2 ಕಪ್
- ಕಾಯಿತುರಿ 1/4 ಕಪ್
- ಎಣ್ಣೆ
- ಸಾಸಿವೆ ಕಾಳು 1/2 ಚಮಚ
- ಮೆಂತೆಕಾಳು 1/4 ಚಮಚ
- ಜೀರಿಗೆ 2 ಚಮಚ
- ಉದ್ದಿನ ಬೇಳೆ 4 ಚಮಚ
- ಕಡ್ಲೆ ಬೇಳೆ(ಬೇಕಾದರೆ) 4 ಚಮಚ
- ಒಣಮೆಣಸು 8
- ಇಂಗು ಚಿಟಿಕೆ
- ಲವಂಗ 5-6
- ಕುತುಂಬರಿ 2 ಚಮಚ
- ಅರಿಶಿನ ಚಿಟಿಕೆ
- ಅಕ್ಕಿಯನ್ನು 1/2 ಘಂಟೆ ಮೊದಲು ತೊಳೆದು ನೆನೆಸಿಡಿ.
- ಒಣಮೆಣಸು,ಉದ್ದಿನ ಬೇಳೆ,ಜೀರಿಗೆ,ಮೆಂತೆ,ಲವಂಗ,ಕುತುಂಬರಿಯನ್ನು ಸ್ವಲ್ಪ ಎಣ್ಣೆ ಬಳಸಿ ಹುರಿದಿಟ್ಟುಕೊಳ್ಳಿ.
- ಕಾಯಿತುರಿ ಮತ್ತು ಹುರಿದಿಟ್ಟ ಸಾಮಗ್ರಿಯನ್ನು ರುಬ್ಬಿಟ್ಟುಕೊಳ್ಳಿ.
- ಕುಕ್ಕರ್ನಲ್ಲಿ 4 ಚಮಚ ಎಣ್ಣೆ ಬಿಸಿಗಿಡಿ.
- ಎಣ್ಣೆ ಬಿಸಿ ಆದ ನಂತರ ಸಾಸಿವೆ ಕಾಳು, ಅರಿಶಿನ, ಇಂಗು, ಬದನೆಕಾಯಿ ಹಾಕಿ ಒಂದು ನಿಮಿಷ ಬಿಟ್ಟು ನೆನೆಸಿಟ್ಟ ಅಕ್ಕಿಯನ್ನು ಹಾಕಿ ಒಂದು ನಿಮಿಷ ಹುರಿಯಿರಿ
- ಈಗ ಕುಕ್ಕರ್ಗೆ ರುಬ್ಬಿಟ್ಟುಕೊಂಡ ಮಿಶ್ರಣ ಮತ್ತು 3ಕಪ್ ನೀರು ಹಾಕಿ.
- ಉಪ್ಪನ್ನು ಹಾಕಿ, ಕುಕ್ಕರ್ ಮುಚ್ಚಿಡಿ.
- 2 ಸೀಟಿ ಹೊಡೆಸಿ,15 ನಿಮಿಷ ಕುಕರ್ ಹಾಗೆ ಬಿಟ್ಟರೆ ವಾಂಗಿ ಬಾತ್ ಸಿದ್ಧ.
No comments:
Post a Comment