ತಯಾರಿಸಲು ಬೇಕಾಗುವ ಅವಧಿ:15-20ನಿಮಿಷ
ಬೇಕಾಗುವ ಸಾಮಗ್ರಿಗಳು:
- ಬದನೆಕಾಯಿ 1
- ಕಾಯಿತುರಿ 1ಕಪ್
- ಮೊಸರು 1ಕಪ್
- ಹಸಿಮೆಣಸು 1-2 ಸಣ್ಣಗೆ ಹೆಚ್ಚಿದ್ದು
- ಈರುಳ್ಳಿ 1 ಸಣ್ಣಗೆ ಹೆಚ್ಚಿದ್ದು
- ಒಣಮೆಣಸು 1
- ಎಣ್ಣೆ
- ಸಾಸಿವೆ ಕಾಳು 1/2 ಚಮಚ
- ಅರಿಶಿನ ಚಿಟಿಕೆ
- ಇಂಗು
- ಉಪ್ಪು ರುಚಿಗೆ
ಮಾಡುವ ವಿಧಾನ:
- ಬದನೆಕಾಯಿಯನ್ನು ಬೆಂಕಿಯಲ್ಲಿ ಸುಟ್ಟು,ಸಿಪ್ಪೆ ತೆಗೆದು,ಹೆಚ್ಚಿ ಅದಕ್ಕೆ ಮೊಸರು ಸೇರಿಸಿಟ್ಟುಕೊಳ್ಳಿ.(ಬದನೆಕಾಯಿ ಬಣ್ಣ ಬದಲಾಗುತ್ತದೆ)
- ಕಾಯಿತುರಿಯನ್ನು ರುಬ್ಬಿ,ಹೆಚ್ಚಿದ ಬದನೆಕಾಯಿಗೆ ಸೇರಿಸಬೇಕು.
- ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸನ್ನು ಬಜ್ಜಿಗೆ ಹಾಕಿ.
- ಎಣ್ಣೆ, ಸಾಸಿವೆ ಕಾಳು, ಒಣಮೆಣಸು, ಅರಿಶಿನ, ಇಂಗಿನ ಒಗ್ಗರಣ್ಣೆ ಕೊಡಿ.
- ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ,ಚೆನ್ನಾಗಿ ಕರಡಿ.
- ಬದನೆಕಾಯಿ ಬಜ್ಜಿ ಅನ್ನದೊಂದಿಗೆ ಚೆನ್ನಾಗಿರುತ್ತದೆ.
No comments:
Post a Comment