To read it in English
ಬೇಕಾಗುವ ಸಾಮಗ್ರಿಗಳು:
- ಅಕ್ಕಿ 1ಕಪ್
- ಮೊಗೆಕಾಯಿ 1/2
- ಉಪ್ಪು
- ಒಣಮೆಣಸು 6-8
- ಕುತುಂಬರಿ 2 ಚಮಚ
- ಹಸಿಮೆಣಸು 1-2
- ಕರಿಬೇವು
- ಕಾಯಿತುರಿ 1/2ಕಪ್
- ಅಕ್ಕಿಯನ್ನು ನೀರಿನಲ್ಲಿ 4 ಗಂಟೆ ನೆನೆಸಿಡಿ.
- ಮೊಗೆಕಾಯಿಯನ್ನು ಕೊಚ್ಚಿಟ್ಟುಕೊಳ್ಳಿ.
- ಅಕ್ಕಿ,ಮೊಗೆಕಾಯಿ,ಒಣಮೆಣಸು,ಕುತುಂಬರಿ,ನೀರು ಹಾಕಿ ರುಬ್ಬಿ.
- ಈ ಹಿಟ್ಟನ್ನು ರಾತ್ರೆ ಹಾಗೆ ಬಿಡಿ.
- ದೋಸೆ ಎರೆಯುವ ಮೊದಲು,ಉಳ್ಳಾಗಡ್ಡೆ,ಕೊತ್ತಂಬರಿ ಸೊಪ್ಪು,ಹಸಿಮೆಣಸು,ಕರಿಬೇವು,ಕಾಯಿತುರಿ,ಉಪ್ಪು ಹಾಕಿ ಚೆನ್ನಾಗಿ ಕಲಸಿ.
- ದೋಸೆ ಕಾವಲಿಯನ್ನು ಬಿಸಿಗಿಡಿ.
- ಕಾವಲಿ ಬಿಸಿಬಂದ ನಂತರ ಕಾವಲಿಗೆ ಎಣ್ಣೆ ಸವರಿ,ದಪ್ಪಾದ ಚಾಟಿ ಎರೆಯಿರಿ.
- ಅದನು ಮುಚ್ಚಿಡಿ.ಎರಡು ಬದಿಗೂ ಬೇಯಿಸಿ.
- ಈ ದೋಸೆಯನ್ನು ಕಾಯಿಸುಳಿ ಬೆಲ್ಲ ಮತ್ತು ತುಪ್ಪದೊಂದಿಗೆ ಸವಿಯಲು ಕೊಡಿ.
No comments:
Post a Comment