ಬೇಕಾಗುವ ಸಮಯ:10ನಿಮಿಷ.
2-4 ಜನರಿಗೆ ಸಾಕಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
- ಮೊಡಂಗಲಕಾಯಿ 2 ಸಣ್ಣಗೆ ಹೆಚ್ಚಿದ್ದು
- ಮೊಸರು ಅಥವಾ ಮಜ್ಜಿಗೆ 1-2ಕಪ್
- ಎಣ್ಣೆ 2ಚಮಚ
- ಹಸಿಮೆಣಸು 1 ಕತ್ತರಿಸಿದ್ದು
- ಸಾಸಿವೆ ಕಾಳು 1/2ಚಮಚ
- ಅರಶಿನ ಚಿಟಿಕೆ
- ಇಂಗು ಚಿಟಿಕೆ
- ಉಪ್ಪು
- ಸಕ್ಕರೆ ಚಿಟಿಕೆ
ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಗಿಡಿ.
- ಎಣ್ಣೆ ಕಾದ ನಂತರ,ಸಾಸಿವೆ ಕಾಳು ಹಾಕಿ(ಸಿಡಿಯುವ ತನಕ ತಡೆದು),ನಂತರ ಹಸಿಮೆಣಸು,ಅರಶಿನ,ಇಂಗು ಹಾಕಿ ಒಂದು ನಿಮಿಷ ಬಿಟ್ಟು,ಮೊಡಂಗಲ ಕಾಯಿ ಹಾಕಿ ಚೆನ್ನಾಗಿ ಹುರಿಯಿರಿ.
- ನಂತರ ಮೊಸರು,ಉಪ್ಪು ಮತ್ತು ಸಕ್ಕರೆ ಹಾಕಿದರೆ,ಮೊಡಂಗಲಕಾಯಿ ಬಜ್ಜಿ ಸವಿಯಲು ಸಿದ್ಧ.
No comments:
Post a Comment