ತಯಾರಿಸಲು ಬೇಕಾಗುವ ಸಮಯ: 10 ನಿಮಿಷ
4 ಜನರಿಗೆ ಒದಗುತ್ತದೆ.
ಬೇಕಾಗುವ ಸಾಮಗ್ರಿಗಳು:
- ಶುಂಠಿ ಒಂದಿಂಚು
- ಕಾಯಿ ತುರಿ 1ಕಪ್
- ಹುಳಿಮಜ್ಜಿಗೆ 1ಕಪ್
- ಉಪ್ಪು
- ಎಣ್ಣೆ
- ಒಣಮೆಣಸು 1
- ಇಂಗು ಚಿಟಿಕೆ
- ಸಾಸಿವೆ ಕಾಳು 1/2ಚಮಚ
- ಅರಿಶಿನ ಚಿಟಿಕೆ
- ಶುಂಠಿ,ಕಾಯಿತುರಿಯನ್ನು ಸ್ವಲ್ಪ ನೀರಿನಿಂದ ರುಬ್ಬಿಟ್ಟುಕೊಳ್ಳಿ.
- ರುಬ್ಬಿದ ಮಿಶ್ರಣಕ್ಕೆ ಉಪ್ಪು,ಮಜ್ಜಿಗೆ ಹಾಕಿ ಕರಡಿ.
- ಎಣ್ಣೆ,ಸಾಸಿವೆ,ಒಣಮೆಣಸು,ಇಂಗು,ಅರಿಶಿನದ ಒಗ್ಗರಣ್ಣೆ ಕೊಡಿ.
- ಬಿಸಿ ಅನ್ನದೊಂದಿಗೆ ಸವಿಯಲು ಕೊಡಿ.
No comments:
Post a Comment