ಮೆಂತೆಕಾಳು ಪಾನೀಯ
ಬಾಯಿ ಹುಣ್ಣು ಆದೊಡನೆ ಮೊದಲು ನೆನಪಿಗೆ ಬರುವ ಮನೆಔಷಧಿ ಇದು.
ಬೇಕಾಗುವ ಸಾಮಗ್ರಿಗಳು:
- ಮೆಂತೆಕಾಳು 5 ಚಮಚ
- ಕಾಯಿತುರಿ 2-4ಚಮಚ
- ಬೆಲ್ಲ
ಮಾಡುವ ವಿಧಾನ:
- ಮೆಂತೆಕಾಳನ್ನು 8 ಘಂಟೆಗಳ ಕಾಲ ಹಾಗೇ ನೆನೆಸಿಡಿ.
- ನಂತರ ಮೆಂತಕಾಳು,ಕಾಯಿತುರಿ ಹಾಕಿ ರುಬ್ಬಿ.
- ಬೆಲ್ಲ ಮತ್ತು ನೀರನ್ನು ಹಾಕಿ ಚೆನ್ನಾಗಿ ಕರಡಿ.
- ಇದನ್ನು 2-3 ಘಂಟೆಯೊಳಗೆ ಖಾಲಿಮಾಡಿ.ನಂತರ ಚೆನ್ನಾಗಿರುವದಿಲ್ಲ.
No comments:
Post a Comment