Click here for english.
ಬೇಕಾಗುವ ಸಾಮಗ್ರಿಗಳು:
- ರಾಗಿಹಿಟ್ಟು 1ಕಪ್
- ಕೊತ್ತಂಬರಿ ಸೊಪ್ಪು ಹೆಚ್ಚಿದ್ದು 4ಚಮಚ
- ಹಸಿ ಮೆಣಸು 1 ಸಣ್ಣಗೆ ಹೆಚ್ಚಿದ್ದು
- ಉಪ್ಪು
- ಉಳ್ಳಾಗಡ್ಡೆ 1ಸಣ್ಣಗೆ ಹೆಚ್ಚಿದ್ದು
- ಎಣ್ಣೆ 4ಚಮಚ
- ರಾಗಿ ಹಿಟ್ಟು,ಕೊತ್ತಂಬರಿ ಸೊಪ್ಪು,ಹಸಿಮೆಣಸು,ಉಳ್ಳಾಗಡ್ಡೆ,ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಹಿಟ್ಟನ್ನು ಕಲಸಿ.
- ಒಂದು ಪ್ಲಾಸ್ಟಿಕ್ ಅಥವಾ ಬಾಳೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿ.
- ಒಂದು ನಿಂಬೆ ಆಕಾರದ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ರೊಟ್ಟಿ ಆಕಾರ ಕೊಡಿ.
- ತವಾ ಬಿಸಿಯಾದ ನಂತರ,ರೊಟ್ಟಿಯನ್ನು ಸುಟ್ಟು ಚಟ್ನಿ ಜೊತೆ ಸವಿಯಲು ಕೊಡಿ.
No comments:
Post a Comment