ತಯಾರಿಸಲು ಬೇಕಾಗುವ ಅವಧಿ: 10ನಿಮಿಷ
ಬೇಕಾಗುವ ಸಾಮಗ್ರಿಗಳು:
- ಕನ್ನೆಕೊಡಿ 10-15
- ಕಾಯಿತುರಿ 1ಕಪ್
- ಹಸಿಮೆಣಸು 5-6 ಅಥವಾ ಸಣ್ಣಮೆಣಸು(ಚಿಟ್ಟಮೆಣಸು) 10-15
- ಬೋಳಕಾಳು 4
- ಉಪ್ಪು
- ಹುಣಸೆ ಹಣ್ಣು ಸಣ್ಣ ನಿಂಬೆ ಗಾತ್ರದ್ದು.
- ಎಣ್ಣೆ
- ಸಾಸಿವೆ ಕಾಳು
- ಉದ್ದಿನ ಬೇಳೆ
- ಕಡ್ಲೆ ಬೇಳೆ
- ಅರಶಿನ
- ಒಣಮೆಣಸು 1
- ಇಂಗು
- ಕರಿಬೇವು
ಮಾಡುವ ವಿಧಾನ:
- ಕನ್ನೆಕೊಡಿ ಮತ್ತು ಹಸಿಮೆಣಸು, ಬೋಳಕಾಳನ್ನು 5ನಿಮಿಷ ಸ್ವಲ್ಪ ಎಣ್ಣೆಯೊಂದಿಗೆ ಸಣ್ಣ ಬೆಂಕಿಯಲ್ಲಿ ಹುರಿದಿಟ್ಟುಕೊಳ್ಳಿ.
- ಈಗ,ಹುರಿದ ಕನ್ನೆಕೊಡಿ, ಹಸಿಮೆಣಸು, ಬೋಳಕಾಳು, ಕಾಯಿತುರಿ, ಹುಣಸೆ ಹಣ್ಣು, ಉಪ್ಪು ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ.
- ರುಬ್ಬಿಟ್ಟ ಮಿಶ್ರಣಕ್ಕೆ, ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಅರಶಿನ,ಒಣಮೆಣಸು,ಕರಿಬೇವು,ಇಂಗಿನ ಒಗ್ಗರಣ್ಣೆ ಕೊಡಿ.
- ಈ ಚಟ್ನಿ ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.
No comments:
Post a Comment