ತಯಾರಿಸಲು ಬೇಕಾಗುವ ಸಮಯ:15-20ನಿಮಿಷ
ಬೇಕಾಗುವ ಸಾಮಗ್ರಿಗಳು:
- ಅಕ್ಕಿಹಿಟ್ಟು 1ಕಪ್
- ಮೈದಾಹಿಟ್ಟು 1/2ಕಪ್
- ರವೆ 1/2ಕಪ್
- ಉಪ್ಪು
- ಅರಿಶಿನ ಚಿಟಿಕೆ
- ಖಾರದ ಪುಡಿ ೧ಚಮಚ
- ಜೀರಿಗೆ 1/2 ಚಮಚ
- ಎಳ್ಳು 1/2ಚಮಚ ಹುರಿದದ್ದು
- ಒಮಕಾಳು ಚಿಟಿಕೆ
- ಎಣ್ಣೆ ಕರಿಯಲು
ಮಾಡುವ ವಿಧಾನ:
- ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು(ಎಣ್ಣೆ ಒಂದನ್ನು ಬಿಟ್ಟು) ಬಿಸಿನೀರನ್ನು,2ಚಮಚ ಬಿಸಿ ಎಣ್ಣೆ ಬಳಸಿ ಚಕ್ಕಲಿ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ.
- ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿಗಿಡಿ.
- ಒಂದು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸಣ್ಣ ಬಳೆ ಆಕಾರ ಕೊಟ್ಟು,ಎಣ್ಣೆ ಬಿಸಿ ಬಂದ ನಂತರ ಅದನ್ನು ಕರಿಯಿರಿ.
- ಕೋಡುಬಳೆ ಸವಿಯಲು ಸಿದ್ಧ.
No comments:
Post a Comment