By guest Blogger Prabha Hebbar
ಬೇಕಾಗುವ ಸಾಮಗ್ರಿಗಳು
- 1 ಕಪ್ ಹೆಚ್ಚಿದ ಒಂದೆಲಗ (Centella asiatica)
- 1 ಕಪ್ ತೆಂಗಿನ ತುರಿ
- 1 ಟೀ ಚಮಚ ಜೀರಿಗೆ
- 1/2 ಟೀಚ ಕೊತ್ಹೊಂಬರಿ ಬೀಜ
- 1 ಟೀಚ ಹುಣಸೆ ಹಣ್ಣಿನ ರಸ
- ಚಿಟಿಕೆ ಇಂಗು
- 3-4 ಒಣಮೆಣಸು
- 1 ಟೀಚ ಎಣ್ಣೆ
- ರುಚಿಗೆ ಉಪ್ಪು
ಒಗ್ಗರಣೆಗೆ:
- 1 ಟೀ ಚಮಚ ಎಣ್ಣೆ
- 1/2 ಸಾಸಿವೆ
- 1 ಒಣಮೆಣಸಿನ ತುಂಡು
ವಿಧಾನ :
- ಒಂದು ಬಾಣೆಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕೊತ್ಹೊಂಬರಿ ಬೀಜ , ಜೀರಿಗೆ, ಒಣಮೆಣಸು ಮತ್ತು ಹೆಚ್ಚಿದ ಒಂದೆಲಗ ಹಾಕಿ 5 ನಿಮಿಷ ಬಾಡಿಸಿ.
- ನಂತರ ಬಾಡಿಸಿದ ಒಂದೆಲಗವನ್ನು ತೆಂಗಿನ ತುರಿ, ಇಂಗು, ಹುಣಸೆ ರಸ, ಮತ್ತು ಉಪ್ಪಿನೊಂದಿಗೆ ಸ್ವಲ್ಪ ನೀರು ಹಾಕಿ ರುಬ್ಬಿ.
- ನಂತರ ಸಾಸಿವೆ, ಒಣಮೆಣಸು ಹಾಕಿ ಒಗ್ಗರಣೆ ಹಾಕಿ. ಒಂದೆಲಗದ ಚಟ್ನಿ ಸಿದ್ದ.
- ಅನ್ನ, ಉಪ್ಪಿನಕಾಯಿ ಮತ್ತೆ ಈರುಳ್ಳಿಯೊಂದಿಗೆ ಬಡಿಸಿ.
No comments:
Post a Comment