Click here for English
ಬೇಕಾಗುವ ಸಾಮಗ್ರಿಗಳು:
- ಬೆಂಡೆಕಾಯಿ ೧೦-೧೨ ಉದ್ದುದ್ದಾಗಿ ಕತ್ತರಿಸಿದ್ದು
- ಕಾಯಿತುರಿ ೧ಕಪ್
- ಮಜ್ಜಿಗೆ ೧-೨ ಕಪ್
- ಜೀರಿಗೆ ೧/೨ ಚಮಚ
- ಕೊತ್ತಂಬರಿ ೨ ಚಮಚ
- ಮೆಂತ್ಯ ೧/೪ ಚಮಚ
- ಸಾಸಿವೆ ಕಾಳು ೧ಚಮಚ
- ಇಂಗು
- ಅರಶಿನ
- ಹಸಿಮೆಣಸು೨-೩
- ಹುಣಸೆ ರಸ ಸ್ವಲ್ಪ (optional )
- ಎಣ್ಣೆ ೨-೩ ಚಮಚ
- ಕರಿಬೇವಿನ ಎಲೆ ಸ್ವಲ್ಪ
- ಉಪ್ಪು
- ಸಕ್ಕರೆ
- ಜೀರಿಗೆ,ಕೊತ್ತಂಬರಿ ,ಸಾಸಿವೆ ,ಮೆಂತೆಯನ್ನು ಸ್ವಲ್ಪ ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.
- ಕಾಯಿತುರಿ,ಹುರಿದ ಸಾಮಗ್ರಿಗಳು ಮತ್ತು ಹಸಿಮೆಣಸನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿಗಿಡಿ.
- ಎಣ್ಣೆ ಬಿಸಿಬಂದ ತಕ್ಷಣ ಕರಿಬೇವು,ಇಂಗು,ಅರಶಿನ 30second ಬಿಟ್ಟು ಬೆಂಡೆಕಾಯಿ ಹಾಕಿ ಚೆನ್ನಾಗಿ ಹುರಿಯಿರಿ.
- ಈಗ ರುಬ್ಬಿದ ಮಿಶ್ರಣ,ಉಪ್ಪು ,ಸಕ್ಕರೆ ಮತ್ತು ಹುಣಸೆ ರಸ ಹಾಕಿ ಚೆನ್ನಾಗಿ ಕುದಿಸಿ.(೫-೧೦ನಿಮಿಷ )
- ನಂತರ ಮಜ್ಜಿಗೆಯನ್ನು ಹಾಕಿ ಚೆನ್ನಾಗಿ ಕರಡಿ.(ಮಜ್ಜಿಗೆ ಹಾಕಿ ಬಿಸಿ ಮಾಡಬೇಡಿ)
- ಬಿಸಿ ಅನ್ನದೊಂದಿಗೆ ಚೆನ್ನಾಗಿರುತ್ತದೆ.